ಬಂಟ್ವಾಳ: ಶಿವಶಕ್ತಿ ಬ್ರದರ್ಸ್, ನಿಟಿಲಾಪುರ (ರಿ.)ಟ್ರಸ್ಟ್ ಹಾಗೂ ಯುವಶಕ್ತಿ ಸಂಘ(ರಿ)ನೆಟ್ಲ ಮತ್ತು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಬಾಗಿತ್ವದಲ್ಲಿ ಉಚಿತ ಡೆಂಗ್ಯೂ ತಪಾಸಣಾ ಶಿಬಿರ ಜೊತೆಗೆ ಕಣ್ಣು, ಕಿವಿ, ಗಂಟಲು ಹಾಗೂ ಸ್ತ್ರೀ ರೋಗ ತಪಾಸಣಾ ಶಿಬಿರ ಶಿವಶಕ್ತಿ ಬ್ರದರ್ಸ್ ನಿಟಿಲಾಪುರ (ರಿ.)ಟ್ರಸ್ಟ್ ಇದರ ತ್ರಿಶೂಲ್ ಸಭಾಂಗಣದಲ್ಲಿ ನಡೆಯಿತು. ಶಿಬಿರವನ್ನು ವಿಟ್ಲ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಉದ್ಘಾಟಿಸಿದರು.



ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ,ಮಾಜಿ ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ದೇವಸ್ಥಾನದ ಮಾಜಿ ಆಡಳಿತ ಮೋಕ್ತೇಶರ ಎ.ಎಸ್ ಭಟ್, ತಾ.ಪಂ.ಸದಸ್ಯ ಮಹಾಬಲ ಆಳ್ವ, ಡಾ|ಲವಿನ್ ಮತ್ತು ಡಾ| ರಾಹುಲ್ ಕುಮಾರ್ ಪ್ರಮುಖರಾದ ರಾಮಚಂದ್ರ ಬನ್ನಿಂತಾಯ, ಸುಬ್ರಹ್ಮಣ್ಯ ಭಟ್ ಮತ್ತಿತತರು ಉಪಸ್ಥಿತರಿದ್ದರು.

