ಮಂಗಳೂರು: ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ನ ವತಿಯಿಂದ ಧನ್ಯೋತ್ಸವ ಕಾರ್ಯಕ್ರಮ ಬಲ್ಲಾಲ್ ಬಾಗ್ ಬಳಿ ಇರುವ ಪತ್ತ್ಮುಡಿ ಸೌಧದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಪಟ್ಲ ಪೌಂಡೇಶನ್ ಟ್ರಸ್ಟ್ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು. ಮೇ 22ರಂದು ಮಂಗಳೂರು ಪುರಭವನದಲ್ಲಿ ಜರಗಿದ ಪಟ್ಲ ಸಂಭ್ರಮ ಕಾರ್ಯಕ್ರಮದ ಯಶಸ್ಸಿಗಾಗಿ ದುಡಿದ ಟ್ರಸ್ಟ್ನ ಸದಸ್ಯರಿಗೆ ಕೃತಜ್ಞತೆಯನ್ನು ಅರ್ಪಿಸಿ ಸ್ಮರಣಿಕೆಗಳನ್ನು ನೀಡಿದರು. ಮುಂದಿನ ದಿನಗಳಲ್ಲಿ ಪ್ರತೀ ಘಟಕಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರಿಗೆ ನೆರವು ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಆಯಾಯ ಘಟಕದ ಪದಾಧಿಕಾರಿಗಳು ಭಾಗವಹಿಸಿ ಯಕ್ಷದ್ರುವ ಪಟ್ಲ ಸಂಭಮ ಕಾರ್ಯಕ್ರಮದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಟ್ರಸ್ಟ್ನ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಮೂಡಬಿದ್ರೆಯ ಎಂ.ಶಾಂತಾರಾಮ ಕುಡ್ವ, ಭುಜಬಲಿ ಧರ್ಮಸ್ಥಳ, ಸರಪಾಡಿ ಅಶೋಕ್ ಶೆಟ್ಟಿ , ಪ್ರದೀಪ್ ಆಳ್ವ ಕದ್ರಿ, ಪೂವಪ್ಪ ಶೆಟ್ಟಿ ವಿಟ್ಲ, ಲಕ್ಷ್ಮೀ ಮಚ್ಚಿನ, ಹರೀಶ್ ಪೂಂಜ, ಸಂತೋಷ್ ಕುಮಾರ್ ರೈ ಬೋಳಿಯಾರ್, ದೇವಾನಂದ ಭಟ್ ಮೊದಲಾದವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಸುಧೀರ್ ಭಟ್ ಎಕ್ಕಾರ್, ಕೋಶಾಧಿಕಾರಿ ಸಿ.ಎ ಸುದೇಶ್ ರೈ, ಜತೆ ಕಾರ್ಯದರ್ಶಿ ರಾಜೀವ ಕೆ. ಕೈಕಂಬ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ.ಭಂಡಾರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ ವಂದಿಸಿದರು.
