ಅನುತ್ತೀರ್ಣವೆಂದು ಎದೆಗುಂದದಿರಿ: ಅಶ್ರಫ್ ಮಾಚಾರ್
ಬಂಟ್ವಾಳ,: ಪರೀಕ್ಷೆಯಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳು ಎದೆಗುಂದದೆ ಪೂರಕ ಪರೀಕ್ಷೆ ಬರೆದು ಉತ್ತೀರ್ಣರಾಗಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸಲಹಾ ಸಮಿತಿ ಸದಸ್ಯ ಅಶ್ರಫ್ ಮಾಚಾರ್ ಕರೆ ನೀಡಿದರು.
ಸೋಮವಾರ ಪಲ್ರ್ಯಯದಲ್ಲಿ ನಡೆದ ಸಿಎಫ್‍ಐ ಬಿ.ಸಿ.ರೋಡು ವಲಯದ ವತಿಯಿಂದ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ನಡೆಸಿದ ಪೂರಕ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಅನುತ್ತೀರ್ಣವೆಂಬುದು ಜೀವನದ ಕೊನೆಯಲ್ಲ. ಅದು ಯಶಸ್ವಿನ ಮೂಲವೂ ಆಗಿರಬಹುದು. ಆದ್ದರಿಂದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರಳಿ ಯತ್ನವ ಮಾಡುವ ಮೂಲಕ ಯಶಸ್ಸು ಕಾಣಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

CFI SHIBIRA
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಎಫ್‍ಐ ಪಲ್ರ್ಯ ಘಟಕದ ಅಧ್ಯಕ್ಷ ಸುಹ್ಯೆಲ್ ಪಲ್ರ್ಯಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಎಫ್‍ಐ ಬಂಟ್ವಾಳ ತಾಲೂಕು ಅಧ್ಯಕ್ಷ ಅಶ್ವಾನ್ ಸಾಧಿಕ್, ಸಿಎಫ್‍ಐ ಬಿ.ಸಿ.ರೋಡು ವಲಯದ ಅಧ್ಯಕ್ಷ ಫಹದ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಅಶ್ಪಾಕ್ ಮಿತ್ತಬ್ಯೆಲು ಸ್ವಾಗತಿಸಿದರು. ಮಾಝಿನ್ ಪಲ್ರ್ಯಯ ವಂದಿಸಿದರು. ಮ್ಯೊದಿನ್ ಖಾದರ್ ಪಲ್ರ್ಯ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *