ಕೈಕಂಬ: ಕರಿಯಂಗಳ ಗ್ರಾಮದ ಬಡಕಬೈಲು ಮಂಗಾಜೆ ಎಂಬಲ್ಲಿ ಬುಧವಾರ ತಡ ರಾತ್ರಿ ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯ ಗೋಡೆ ಹಾನಿಯಾಗಿದ ಘಟನೆ ಸಂಭವಿಸಿದೆ.
ಮಂಗಾಜೆ ಮಾಣಿ ಎಂಬವರಿಗೆ ಒಬ್ಬಳೆ ಮಗಳು ನಾಗವೇಣಿ ನಾಗವೇಣಿಯವರ ತಂದೆ ತಾಯಿ ಮರಣ ನಂತರ ಒಬ್ಬರೆ ಮನೆಯಲ್ಲಿದ್ದು ಜೀವನ ಸಾಗಿಸುತ್ತಿದ್ದಾರೆ. ಅವಿವಾಹಿತರಾಗಿದ್ದ ಅವರು ತಂದೆ ತಾಯಿಯನ್ನು ಕಳೆದು ಕೊಂಡ ಬಳಿಕ ನಾಗವೇಣಿಯವರು ಅಂಗನವಾಡಿಯಲ್ಲಿ ಟೀಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿನ್ನೆ ರಾತ್ರಿ ಎಂದಿನಂತೆ ಊಟ ಮುಗಿಸಿ ಮಳಗಿ ನಿದ್ರೆಯ ಮಂಪರಿನಲ್ಲರುವಾಗಲೇ ಜೋರಾದ ಸಿಡಿಲು ಬಡಿದ ಸಬ್ಧ ಕೇಳಿದ ಅವರು ಮೂರ್ಚೆ ಹೋಗಿದ್ದಾರೆ.
]
ಆಸುಪಾಸಿನ ಮನೆಯವರು ಧಾವಿಸಿ ಬಂದು ಅವಳ ಯೋಗಕ್ಷೇಮವನ್ನು ವಿಚಾರಿಸಿ ದೈರ್ಯ ತುಂಬಿದ್ದಾರೆ. ನಂತರ ಯತಾ ಸ್ಥಿತಿಗೆ ಬಂದು ಮನೆಯನ್ನು ಪರಿಶೀಲಿಸಿದಾಗ ಸಿಡಿಲು ತನ್ನ ಮನೆಗೆ ಬಡಿದಿದೆ ಎಂದು ಗೊತ್ತಾಯಿತು. ಕರಂಟ್ ಮೀಟರಿನ ಪಕ್ಕದಲ್ಲೇ ಮಲಗಿದ್ದು ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸ್ಥಳಕ್ಖೆ ಯಾವುದೇ ಅಧಿಕಾರಿಗಳಿಗೆ ಪೋನಾಯಿಸಿದಾಗ ಯಾರು ಪೋನ್ ತೆಗೆಯುತ್ತಿರಲಿಲ್ಲಿ ಎಂದು ಸ್ಥಳೀಯ ಪಂಚಾಯತ್ ಸದಸ್ಯರು ತಿಳಿಸಿದ್ದಾರೆ. ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ , ಉಪಾಧ್ಯಕ್ಷ ಚಂದ್ರಶೇಖರ ರಾವ್ , ತಾಲೂಕು ಪಂಚಾಯತ್ ಸದಸ್ಯ ಯಶವಂತ ಪೂಜಾರಿ ಪೊಳಲಿ, ಪಂಚಾಯತ್ ಸದಸ್ಯರಾದ ಸುರೇಶ್ ಪೂಜಾರಿ ಮಣಿಕಂಠಪುರ, ಕಿಶೋರ್ ಕುಮಾರ್ ಮತ್ತು ಸ್ಥಳೀಯ ಉಧ್ಯಮಿ ಸುಕೇಶ್ ಚೌಟ ಸ್ಥಳಕ್ಕೆ ಭೇಟಿ ನೀಡಿದರು.










