ಕೈಕಂಬ: ದೇಶದ ಪ್ರಜೌವಂತ ನಾಗರಿಕನಾಗಿ ಬದುಕು ನಡೆಯಲು ಶೈಕ್ಷಣಿಕ ಪ್ರಗತಿಯೇ ಮೂಲ ಆಧಾರ ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ವೈಕ್ತಿಯೊಬ್ಬನಲ್ಲಿ ಉತ್ತಮ ವೈಕ್ತಿತ್ವವನ್ನು ರೂಪಿಸಲು ಸಾಧ್ಯ. ಆರ್ಥಿಕ ಬಡತನವು ಶೈಕ್ಷಣಿಕ ಪ್ರಗತಿಯ ಪಥದಲ್ಲಿ ತಡೆಯಾಗಬಾರದು ಉಳ್ಳವರು ವಿಧ್ಯಾರ್ಜನೆಗಾಗಿ ಸಹಕರಿಸುವುದು ಪುಣ್ಯದ ಕೆಲಸ. ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹೇಳಿದರು. ಅವರು ವೀರ ಯೋಧ ಯಾಧವ ಫ್ರೆಂಡ್ಸ್ ಇದರ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದರು.

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಒಂದನೇ ತರಗತಿಯಿಂದ ಪದವಿಯವರೆಗಿನ ಅರ್ಹ ಮಕ್ಕಳಿಗೆ ವೀರ ಯೋಧ ಯಾಧವ ಫ್ರೆಂಡ್ಸ್ ಇದರ ವತಿಯಿಂದ ಅಮುಂಜೆ ವಿನಾಯಕ ಸದಾಶಿವ ದೇವಸ್ಥನದ ಸಭಾಂಗಣದಲ್ಲಿ ಮೇ. 29ರಂದು ಭಾನುವಾರ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು. ನಾನಾ ಶಾಲೆಗಳಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ನಡೆಸಿದ 500 ಅಂಕಗಳಿಗಿಂತ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕೆಯ ಸಲುವಾಗಿ ಮಾತೃ್ ಶ್ರೀಯವರದ ಸುಮತಿ ಹೆಗ್ಡೆ ಅವರ ಸ್ಮಾರಣಾರ್ಥವಾಗಿ ಅಮ್ಮುಂಜೆಗುತ್ತು ದೇವ್ ದಾಸ್ ಹೆಗ್ಡೆ ಆರ್ಥಿಕ ಸಹಾಯ ನೀಡಿದರು. ಹಾಗೂ ಧಾನಿಗಳಾದ ನಾಗೇಶ್ ರಾವ್ , ಅಮ್ಮುಂಜೆ ಗುತ್ತು ಜೀವರಾಜ ಶೆಟ್ಟಿ ಇವರುಗಳು ಆರ್ಥಿಕ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ಶುಭಸಂಶನೆಗೈದು ಮಾತನಾಡಿದ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಇಂದು ಶಿಕ್ಷಣರಂಗದಲ್ಲಿ ಮೌಲ್ಯಗಳ ಕೊರತೆ ಎದ್ದು ಕಾಣುತ್ತದೆ ವಿದ್ಯಾರ್ಜನೆಗಾಗಿ ನೀಡಿದ ಸಹಕಾರ ಉತ್ತಮ ಸಮಾಜ ರೂಪಿಸುವುದಕ್ಕೂ ಪ್ರೇರಣೆಯಗಬಲ್ಲುದು, ಮಕ್ಕಳು ಓದುವ ಅಭ್ಯಾಸವನ್ನು ಹೆಚ್ಚಿಸಿಕೊಂಡಾಗ ಉತ್ತಮ ಅಂಕಗಳನ್ನು ಪಡೆಯಬಹುದು ಎಂದರು. ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ, ಪಂಚಾಯತ್ ಸದಸ್ಯರಾದ ಚಂದ್ರಶೇಖರ ಭಂಡಾರಿ, ಹರೀಶ್ ಪೂಜಾರಿ, ಮತ್ತು ಪ್ರೇಮಚೌಟ, ವೀರ ಯೋಧ ಯಾದವ ಫ್ರೆಂಡ್ಸ್ ಇದರ ಅಧ್ಯಕ್ಷ ಪ್ರಶಾಂತ್ ಕುಲಾಲ್ , ಸ್ಥಾಪಕಾಧ್ಯಕ್ಷ ಜನಾರ್ಧನ ಬಾರಿಂಜೆ ಉಪಸ್ಥಿತರಿದ್ದರು. ಸತ್ಯಪ್ರಸಾದ್ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು.




















