ಬಂಟ್ವಾಳ:ತಾಲ್ಲೂಕಿನ ಕೊಯಿಲ ಗ್ರಾಮದ ಕೈತ್ರೋಡಿ ನಿವಾಸಿ, ಪ್ರಗತಿಪರ ಕೃಷಿಕ ಕೆ.ವಿಠಲ ರೈ ವಳವೂರುಗುತ್ತು (92) ಇವರು ಅಸೌಖ್ಯದಿಂದ ಸೋಮವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ನಾಲ್ವರು ಪುತ್ರಿಯರು ಇದ್ದಾರೆ.
ಕಳ್ಳಿಗೆ ಗ್ರಾಮದ ಪೆರೋಡಿ ದೇವಂದಬೆಟ್ಟು ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಕಳ್ಳಿಗೆ ಕನಪಡಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ, ಭಾರತೀಯ ಜೀವ ವಿಮಾ ನಿಗಮ ಹಿರಿಯ ಪ್ರತಿನಿಧಿಯಾಗಿ, ಬಂಟ್ವಾಳ ಕಾಂಗ್ರೆಸ್ ಅಧ್ಯಕ್ಷರಾಗಿ, ಕೃಷಿ ಮತ್ತು ಕೈಗಾರಿಕಾ ಬ್ಯಾಂಕಿನ ಉಪಾಧ್ಯಕ್ಷರಾಗಿ, ಬಂಟ್ವಾಳ ಲಯನ್ಸ್ ಕ್ಲಬ್ಬಿನ ಸ್ಥಾಪಕ ಸದಸ್ಯರಾಗಿ ಗುರುತಿಸಿಕೊಂಡು ವಿವಿಧ ಸಂಘ ಸಂಸ್ಥೆಗಳ ಸನ್ಮಾನ ಮತ್ತು ಗೌರವಕ್ಕೆ ಪಾತ್ರರಾಗಿದ್ದರು.
ಕೈತ್ರೋಡಿ ಪರಿಸರದಲ್ಲಿ ಹಿರಿಯ ನಾಗರಿಕರಾಗಿದ್ದ ಇವರು ಕೃಷಿ ಚಟುವಟಿಕೆಗಳಿಗೆ ತನ್ನ 92ರ ಹರೆಯದಲ್ಲಿಯೂ ಸ್ವತಃ ಕಾರು ಚಲಾಯಿಸುವ ಮೂಲಕ ಸ್ವಾಭಿಮಾನದ ಬದುಕಿಗೆ ಮಾದರಿಯಾಗಿದ್ದರು. ಕಳೆದ ಒಂದು ವಾರದ ಹಿಂದೆಯಷ್ಟೇ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಮನೆಗೆ ವಾಪಾಸಾಗಿದ್ದರು.
