ಬಂಟ್ವಾಳ: ತಾಲೂಕು ಕೊಳ್ನಾಡು ಗ್ರಾಮದ ನಾಟೆಕಲ್ಲು ಗೋಪಾಲ ನಲಿಕೆಯವರ ಪತ್ನಿ ಗುರುವಮ್ಮ ಇವರು ದುಡಿಯಲು ಅಸಕ್ತರಾಗಿದ್ದು ಇವರಿಗೆ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ವತಿಯಿಂದ 126 ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಸಂಘಟನೆಯ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ರವರ ನೇತೃತ್ವದಲ್ಲಿ 50 ಕೆ ಜಿ ಅಕ್ಕಿಯನ್ನು ಸಂಘದ ವಿಟ್ಲದ ಕಛೇರಿಯಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಆನಂದ ನಾಯ್ಕ ಅಪ್ಪೇರಿಪಾದೆ, ಗೌರವ ಸಲಹೆಗಾರ ರಾಮಣ್ಣ ಪಿಲಿಂಜ, ಪದಾಧಿಕಾರಿಗಳಾದ ಮೋಹನದಾಸ ಯು ವಿಟ್ಲ, ಗೋಪಾಲ ನೇರಳಕಟ್ಟೆ, ಸದಸ್ಯರಾದ ಶ್ರೀಧರ್ ಕಲ್ಲೆಂಚಿಪಾದೆ, ವಸಂತ ಕಾಡುಮಠ, ಲಕ್ಷ್ಮಿ ಕಲ್ಲೆಂಚಿಪಾದೆ ಉಪಸ್ಥಿತರಿದ್ದರು
