ಕೈಕಂಬ: ಪೊಳಲಿ ರಾಮಕೃಷ್ಣ ತಪೋವವನದ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ಎಸ್ ಎಂಡ್ ಎಸ್ ಆಪರೆಲ್ಸ್ ಕಂಪೆನಿ ಯ ನಿರ್ದೇಶಕರಾದ ಗಣೇಶ್ ಎಸ್ ಆರ್ ಅವರು ಒಂದು ಜತೆ ಪ್ಯಾಂಟ್ ಶರ್ಟ್ ಗಳನ್ನು ಶನಿವಾರ ಪೊಳಲಿ ರಾಮಕೃಷ್ಣ ತಪೊವನದಲ್ಲಿ ಸುಮಾರು 65 ಮಕ್ಕಳಿಗೆ ವಿತರಿಸಿದರು. ಗಣೇಶ್ ಎಸ್ ಆರ್ ಅವರು ಸತತ ಎರಡು ವರ್ಷಗಳಿಂದ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಪೊಳಲಿಗೆ ಆಗಮಿಸಿ ಬಾಲಕಾಶ್ರಮದ ಮಕ್ಕಳಿಗೆ ಡ್ರೆಸ್ ವಿತರಿಸುವರು ಈ ಸಂದರ್ಭದಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಪ್ರಸಾದ ನೀಡಿ ಆಶೀರ್ವದಿಸಿದರು.




