ಬಂಟ್ವಾಳ : ಅಖಿಲ ಭಾರತ ಭದ್ರತಾ ಪಡೆಗಳ ಸೇವಾ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾಗಿ ಬಿ.ಚಂದಪ್ಪ ಮೂಲ್ಯ ಡೆಪ್ಯೂಟಿ ಕಮಾಂಡೆಂಟ್ ಬಿ.ಎಸ್.ಎಫ್ (ನಿವೃತ್ತ) ಇವರನ್ನು ಮೂರು ವರ್ಷಗಳ ಅವಧಿಗೆ ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಸಮಾವೇಶದಲ್ಲಿ ಆಯ್ಕೆ ಮಾಡಲಾಗಿದೆ. ಇವರು ಪ್ರಸಕ್ತ ಅಖಿಲ ಭಾರತ ಪ್ರಜಾಪತಿ (ಕುಂಬಕಾರ್) ಸಂಘ ದೆಹಲಿ ದಕ್ಷಿಣ ವಲಯ (ಕರ್ನಾಟಕ , ಕೇರಳ ಮತ್ತು ತಮಿಳ್ನಾಡು) ವಲಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೂಲತ: ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದವರು.

