ಬಂಟ್ವಾಳ: ರವಿವಾರ ಸಂಜೆಯ ಬಳಿಕ ಬೀಸಿದ ಸುಂಟರ ಗಾಳಿ ಹಾಗೂ ಭಾರೀ ಮಳೆಗೆ ತಾಲೂಕಿಕ ಕೆಂಕಕಜೆಕಾರು ಮತ್ತು ಮಣಿನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವದ ಮನೆ, ತೋಟಕ್ಕೆ ಹಾನಿಯಾಗಿದ್ದು ಸುಮಾರು 1.60 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ್ ಪುರಂದರ ಹೆಗಡೆ ತಿಳಿಸಿದ್ದಾರೆ.
ತೆಂಕಕಜೆಕಾರು ಗ್ರಾಪಂ ವ್ಯಾಪ್ತಿಯ ನಿವಾಸಿಗಳಾದ ಪೂವಪ್ಪ ಪೂಜಾರಿ, ಶಿವಪ್ಪ ಪೂಜಾರಿ, ನಾರಾಯಣ ಪೂಜಾರಿ ವಾಸ್ತವದ ಮನೆಗೆ ಹಾನಿಯಾಗಿದ್ದು ತಲಾ 20 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಮಣಿನಾಲ್ಕೂರು ಗ್ರಾಪಂ ವ್ಯಾಪ್ತಿಯ ನಿವಾಸಿಗಳಾದ ಹುಸೈನ್, ಆದಂ, ಬೀಪಾತುಮ್ಮ, ಲತೀಫ್, ಶ್ರೀಧರ ನಾಯ್ಕ, ಅಹ್ಮದ್ ಕುಂಞÂ ಎಂಬವರ ವಾಸ್ತವದ ಮನೆಗೆ ಹಾನಿಯಾಗಿದ್ದು ಸುಮಾರು 45 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.

images
ಮಣಿನಾಲ್ಕೂರು ಗ್ರಾಮದ ಆದಂ, ಶಿವರಾಮ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ ಎಂಬವರ ಅಡಿಕೆ ತೋಡಕ್ಕೆ ಹಾನಿ ಉಂಟಾಗಿದ್ದು ಸುಮಾರು 55 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *