ಬಂಟ್ವಾಳ: ಶ್ರೀ ನಾಗಬ್ರಹ್ಮ ಶ್ರೀ ಕನ್ನಿಕೆ ದೇವಸ್ಥಾನ ಶ್ರೀ ಕ್ಷೇತ್ರ ಗೋಮಾಯಿ, ರಾಮಲಕಟ್ಟೆ ತುಂಬೆ ಇದರ ಪ್ರತಿಷ್ಠಾ ವರ್ಧಂತ್ಸುತ್ಸವ ಪೊಳಲಿ ಗಿರಿಪ್ರಕಾಶ್ ತಂತ್ರಿ ಅವರ ಪೌರೋಹಿತ್ಯದಲ್ಲಿ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ಟ್ರಾಫಿಕ್ ಪೋಲೀಸ್ ಉಪನಿರೀಕ್ಷಕ ಚಂದ್ರಶೇಖರಯ್ಯ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂಸದಸ್ಯ ರವೀಂದ್ರ ಕಂಬಳಿ, ತಾ.ಪಂ.ಸದಸ್ಯ ಗಣೇಶ್ ಸುವರ್ಣ ತುಂಬೆ, ಗ್ರಾ.ಪಂ. ಸದಸ್ಯೆ ಸಂಗೀತ ವಿನೋದ್ ಕಾಣೆಮಾರ್, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಉದಯ ತುಂಬೆ, ಪದಾಧಿಕಾರಿಗಳಾದ ವಿಜೇತ್ ಗೋಮಾಯಿ, ಸಂಜೀವ ಪೂಜಾರಿ,ಧನಂಜಯ, ಸಂಜೀವ ಪೂಜಾರಿ ಮತ್ತು ಸಂತೋಷ್ ಕೋಟ್ಯಾನ್ ತುಂಬೆ ಉಪಸ್ಥಿತರಿದ್ದರು.

IMG-20160512-WA0024

By suddi9

Leave a Reply

Your email address will not be published. Required fields are marked *