ಬಂಟ್ವಾಳ; ಸಜಿಪಮೂಡ ಗ್ರಾಮದ ವ್ಯಕ್ತಿಯೊಬ್ಬರು ಕಳೆದ ಹದಿನೈದು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ. ಇಲ್ಲಿನ ಕೋಲ್ಸ ಸಾರ್ಟ್ ಮನೆ ನಿವಾಸಿ ಸುಧಾಕರ(25) ನಾಪತ್ತೆಯಾದವರಾಗಿದ್ದು,ಅವರ ಪತ್ನಿ ಯಶೋಧ ಪೊಲೀಸರಿಗೆ ದೂರು ನೀಡಿದವರು.
ಮಿತ್ತಮಜಲು ಎಂಬಲ್ಲಿರುವ ಗಿರಿ ಅಲ್ಯೂಮೀನಿಯಂ ನಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ ಅವರು ಕಳೆದ ನಾಲ್ಕುವರ್ಷದ ಹಿಂದೆ ಯಶೋಧ ಅವರನ್ನು ವಿವಾಹವಾಗಿದ್ದು, ಒಂದೂವರೆ ವರ್ಷದ ಹೆಣ್ಣುಮಗುವಿದೆ. ಸುಧಾಕರ ರವರು ಮದುವೆ ಸಂದರ್ಭ ಹಾಗೂ ನಂತರದ ಸಂದರ್ಭದಲ್ಲಿ ಸಾಲಮಾಡಿದ್ದು, ಚಿನ್ನಾಭರಣಗಳನ್ನು ಅಡವಿಟ್ಟು ಆರ್ಥೀಕವಾಗಿ ಸಂಕಷ್ಟದಲ್ಲಿದ್ದರು. ಕಳೆದ ಎ.24 ರಂದು ಕೆಲಸಕ್ಕೆಂದು ಮನೆಯಿಂದ ತೆರಳಿದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ , ಈ ಬಗ್ಗೆ ಕೆಲಸ ನಿರ್ವಹಿಸುವ ಅಂಗಡಿಗೆ ತೆರಳಿ ವಿಚಾರಿಸಿದಾಗ ಎ.26 ರಂದು ಬೆಳಿಗ್ಗೆ ಅಂಗಡಿಯಿಂದ ತೆರಳಿದ್ದಾರೆಂದು ತಿಳಿಸಿದ್ದಾರೆ. ಆ ಬಳಿಕ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ದೂರು ನೀಡುತ್ತಿರುವುದಾಗಿ ಪತ್ನಿ ಯಶೋಧ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

