ಬಂಟ್ವಾಳ: ರೈತರು ಟ್ರಾಕ್ಟರ್ ಮೂಲಕ ಬೆಂಗಳೂರಿಗೆ ಬಂದಾಗ ಅವರನ್ನು ವಿಧಾನಸೌಧಕ್ಕೆ ಕರೆಸಿ ಮಾತಿಕತೆ ನಡೆಸುವ ಮೂಲಕ ಅವರ ಬೇಡಿಕೆಯನ್ನು ಪೂರೈಸಿರುವ ಸಿದ್ದರಾಮಯ್ಯನವರು ಕಳೆದ ಹಲವು ಸಮಯದಿಂದ ನೇತ್ರಾವತಿ ತಿರುವು ಯೋಜನೆಯ ವಿರುದ್ದ ಹೋರಾಡುತ್ತಿರುವ ದ.ಕ.ಜಿಲ್ಲೆಯ ಹೋರಾಟಗಾರರನ್ನು ಸೌಜನ್ಯಕ್ಕೂ ಕರೆಸಿ ಚರ್ಚಿಸದಿರುವುದು ದುರಾದೃಷ್ಟಕರ ಎಂದು ನೇತ್ರಾವತಿ ಸಂಯುಕ್ತ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಶೆಟ್ಟಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ನೇತ್ರಾವತಿ ನದಿ ತಿರುವುಯೋಜನೆಯನ್ನು ವಿರೋಧಿಸಿ ಮೇ16ರಂದು ನಡೆಯಲಿರುವ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಗೂ ಮೇ 19ರಂದು ನಡೆಯಲಿರುವ ದ.ಕ.ಜಿಲ್ಲಾ ಬಂದ್ ಹಿನ್ನಲೆಯಲ್ಲಿ ಶನಿವಾರ ಬಿ.ಸಿ.ರೋಡಿನ ಗಾಣದಪಡ್ಪುವಿನಲಲಿರುವ ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಲ್ಕು ಬಾರಿ ಯೋಜನೆಯ ಹೆಸರನ್ನು ಬದಲಾಯಿಸಿದೆ ಆದರೆ ಅದರ ಉದ್ದೇಶ ನೇತ್ರಾವತಿ ನದಿಯನ್ನು ತಿರುಗಿಸುವುದೇ ಆಗಿದೆ. ನದಿ ನೀರು ಸಮುದ್ರಕ್ಕೆ ಸೇರುವುದು ಪಾಕೃತಿಕ ನಿಯಮವಾಗಿದೆ ಎಂದ ಅವರು ಈ ಯೋಜನೆಯನ್ನು ವಿರೋಧಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಮೇ 16 ಹಾಗೂ 19ರಂದು ನಡೆಯುವ ಪ್ರತಿಭಟನೆಗೆ ಪಕ್ಷ ಜಾತಿ ಧರ್ಮ ಭೇದ ಮರೆತು ಎಲ್ಲರೂ ಒಟ್ಟಾಗಿ ಕೈ ಜೋಡಿಸ ಬೇಕು ಎಂದು ಮನವಿ ಮಾಡಿದರು. ಅತಿಥಿಯಾಗಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳೀಪಾಡಿಗುತ್ತು ಅವರು ಮಾತನಾಡಿ ರಾಜಕೀಯೇತರ ನಾಯಕರಿಗೆ ಈ ಹೋರಾಟದ ಮುಖಂಡತ್ವವನ್ನು ನೀಡಬೇಕು ಆಗಬೇಕು ಯಶಸ್ಸು ಸಿಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
7btl-Ethinahole

KAR_5699
ಸಮಿತಿಯ ಮುಖಂಡರಾದ ಎಂ.ಜಿ.ಹೆಗಡೆ, ದಿನಕರ ಶೆಟ್ಟಿ ಅವರು ಮಾತನಾಡಿ ಮಾಡು ಇಲ್ಲವೆ ಮಡಿ ಹೋರಾಟದಂತೆ ನಾವು ನೇತ್ರಾವತು ಉಳಿಸುವ ನಿಟ್ಟಿನಲ್ಲಿ ಪಣ ತೊಡಬೇಕಾಗಿದೆ. ನೇತ್ರಾವತಿ ಬರಡಾಗಿ ಇಡೀ ಜಿಲ್ಲೆಗೆ ಬರದ ಪರಸ್ಥಿತಿ ಬಂದೋದಗಿದೆ. ಇನ್ನಾದರೂ ಜಿಲ್ಲೆಯ ಜನರು ಈ ಯೋಜನೆಯ ವಿರುದ್ದ ಧ್ವನಿ ಎತ್ತುವಂತೆ ಕರೆ ನೀಡಿದರು.
ಪ್ರಾಸ್ತವಿಕವಾಗಿ ಸಾಮಾಜಿಕ ಕಾರ್ಯಕರ್ತ ಹರಿಕೃಷ್ಣ ಬಂಟ್ವಾಳ ಮಾತನಾಡಿ ನಮ್ಮ ಜಿಲ್ಲೆಯ ಬುದ್ದಿವಂತರೋ, ಪೌರುಷವಂತರೋ ಎನ್ನುವುದನ್ನು ಸಾಬೀತುಪಡಿಸಲು ಎತ್ತಿನ ಹೊಳೆ ಯೋಜನೆ ವಿರುದ್ದದ ಹೋರಾಟವನ್ನು ಸವಾಲಾಗಿ ಸ್ವೀಕರಿಸಬೇಕಾಗಿದೆ ಇದುವರೆಗೆ ದ.ಕ.ಜನರ ಹೋರಾಟದ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.
ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಮುತ್ತಪ್ಪ ಪೂಜಾರಿ ಬಂಟ್ವಾಳ, ಕೃಷ್ಣಪ್ಪ ಪೂಜಾರಿ ದೋಟ, ಮೊನೀಶ್ ಆಲಿ, ಮುಸ್ತಾಕ್, ರಾಜಮಣಿ ರಾಮಕುಂಜ, ಗೋಪಾಲ ಅಂಚನ್, ಯೂಸುಫ್ ಆಲಡ್ಕ, ನಾರಾಯಣ ಕುಡ್ವ ಮತ್ತಿತರರು ಸಲಹೆ ನೀಡಿದರು.
ಇದೇ ವೇಳೆ ನೇತ್ರಾವತಿ ಉಳಿವಿಗಾಗಿ ನಮ್ಮ ಬದುಕಿಗಾಗಿ ಹೋರಾಡೋಣ ಬನ್ನಿ ಎಂಬ ಘೋಷಣೆಯ ಕರಪತ್ರವನ್ನು ಅನಾವರಣಗೊಳಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಸೇಸಪ್ಪ ಕೋಟ್ಯಾನ್, ಸಮಿತಿ ಪ್ರಮುಖರಾದ ಹನೀಫ್ಖಾನ್ ಕೋಡಾಜೆ, ಶಶಿರಾಜ್ ಶೆಟ್ಟಿ ಕೊಳಂಬೆ, ಯೋಗೀಶ್ ಕುಮಾರ್ ಜಪ್ಪು, ಜಿ.ಆನಂದ, ವಾಸು ಪೂಜಾರಿ, ಗಂಗಾಧರ, ದೇವದಾಸ ಶೆಟ್ಟಿ, ಸದಾಶುವ ಬಂಗೇರಾ, ಕೃಷ್ಣ ಅಲ್ಲಿಪಾದೆ, ಪ್ರಭಾಕರ ದೈವಗುಡ್ಡೆ, ಪುರುಷೋತ್ತಮ ಸಾಲ್ಯಾನ್ ಶಂಭೂರು, ಸುಂದರ ರಾವ್, ಲೋಕನಾಥ ಶೆಟ್ಟಿ, ಶರತ್ ಕುಮಾರ್, ಸಾಹುಲ್ ಹಮೀದ್, ಅಮೀರ್ ಅಹಮದ್, ಜಯರಾಮ್ ಸಾಮಾನಿ, ಮಹಾಬಲ ಆಳ್ವ, ಚಂದ್ರಹಾಸ ರೈ, ಕೆ.ಎಚ್.ಅಬೂಬಕ್ಕರ್, ಆನಂದ ಶಂಭೂರು, ರಾಮದಾಸ ಬಂಟ್ವಾಳ ಮೊದಲಾದವರು ಹಾಜರಿದ್ದರು.
ಪಿ.ಎ.ರಹೀಂ ಸ್ವಾಗತಿಸಿ, ನಿರೂಪಿಸಿದರು.

By suddi9

Leave a Reply

Your email address will not be published. Required fields are marked *