ಬಂಟ್ವಾಳ: ನೀರನ್ನು ಮಿತವಾಗಿ ಬಳಸಿ, ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಿ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಹೇಳಿದರು. ಅವರು ಬಂಟ್ವಾಳ ತಾಲೂಕು ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದರ ಆಶ್ರಯದಲ್ಲಿ ಬಂಟ್ವಾಳ ಸ್ತ್ರೀ ಶಕ್ತಿ ಭವನದಲ್ಲಿ ನಡೆದ ಬೇಸಿಗೆ ಶಿಬಿರದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದರು. ಇಂತಹ ಶಿಬಿರಗಳು ಮಕ್ಕಳ ಮುಂದಿನ ಜೀವನಕ್ಕೆ ಬೆಳಕಾಗಬೇಕು. ನಮ್ಮ ಜೀವನ ಇತರರ ಜೇವನಕ್ಕೂ ಬೆಳಕಾಗಬೇಕು ಎಂದರು.
DSC_0805
ಕಾರ್ಯಕ್ರಮವನ್ನು ಕ್ಷೇತ್ರಶಿಕ್ಷಾಣಾಧಿಕಾರಿ ಶೇಷಶಯನ ಕಾರಿಂಜ ಉದ್ಘಾಟಿಸಿದರು. ಜಿಲ್ಲಾ ನಿರೀಕ್ಷಾಣಾಧಿಕಾರಿ ನಟರಾಜ್, ವಿಟ್ಲ ಸಿಡಿಪಿಒ ಸುಧಾಜೋಷಿ, ಪತ್ರಕರ್ತ ಗೋಪಾಲಅಂಚನ್, ಅಂಗವಿಕಲರ ಕಲ್ಯಾಣಾಧಿಕಾರಿ ಅನ್ನಪೂರ್ಣ ಉಪಸ್ಥಿತರಿದ್ದರು. ಸಿಡಿಪಿಒ ಮಲ್ಲಿಕಾ ಜೋಷಿ ಸ್ವಾಗತಿಸಿ, ಸಿಡಿಪಿಒ ಮೇಲ್ವಿಚಾರಕಿ ಪುಷ್ಪಲತಾ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *