ಬಂಟ್ವಾಳ : ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ವತಿಯಿಂದ ಸ್ವ-ಉದ್ಯೋಗ ಚಟುವಟಿಕೆಗಾಗಿ ಕ್ರೈಸ್ತ ಸಮುದಾಯದವರಿಗೆ ಮಂಜೂರಾದ 25,000ಮೊತ್ತದ ಚೆಕ್ಕನ್ನು ತುಂಬೆ ಗ್ರಾಮದ ಇಬ್ಬರು ಫಲಾನುಭವಿಗಳಿಗೆ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಮಜಿ ವಿತರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ , ಮಾಜಿ ಪಂ.ಸದಸ್ಯ ಗೋಪಾಲ್ ಕೃಷ್ಣ ತುಂಬೆ ಪ್ರಮುಖರಾದ ದೇವ್ದಾಸ್ ತುಂಬೆ , ಮಹಾಬಲ ಮಜಿ ಉಪಸ್ಥಿತರಿದ್ದರು.
