2615ನೇ ಮಹಾವೀರ ಜನ್ಮಕಲ್ಯಾಣೋತ್ಸವವು ದಿನಾಂಕ: 19/04/2016ನೇ ಮಂಗಳವಾರದಂದು ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ಊರಿನ ಬಾಲಕ ಬಾಲಕಿಯರಿಂದ ಮೆರವಣಿಗೆ, ಅಭಿಷೇಕ, ಅಷ್ಟವಿಧಾರ್ಚನೆ, ಸಂಗೀತ, ಪೂಜೆಗಳು ಜರಗಿದವು. ಜಿನಬಾಲಕನ ವೈಭವದ ನಾಮಕರಣ ಉತ್ಸವವನ್ನು ಹೆಗ್ಗಡೆಯವರ ಕುಟುಂಬದವರು ನೆರವೇರಿಸಿದರು. ಮಕ್ಕಳು ಸಿಹಿ ಹಂಚಿ ಸಂತಸ ಪಟ್ಟರು. ಶ್ರೀ 105 ನಿರ್ವಾಣ ಸಾಗರರು ಉಪಸ್ಥಿತರಿದ್ದು, ಉಪಕಥೆಗಳಿಂದ ಪ್ರವಚನ ನೀಡಿದರು. ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಮಾ|| ಆರ್ಯಮನ್ ಹಾಗೂ ಕು|| ಮಾನ್ಯ ಬಹುಮಾನ ವಿತರಿಸಿದರು. ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಅನೇಕ ಶ್ರಾವಕ ಶ್ರಾವಕಿಯರು ಪಾಲ್ಗೊಂಡು ಪುಣ್ಯಭಾಗಿಗಳಾದರು. ಶ್ರೀ ಬಾಹುಬಲಿ ಸೇವಾ ಸಮಿತಿಯ ಸದಸ್ಯರು ಸಹಕರಿಸಿದರು.

