ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಗೋಳ್ತಮಜಲು ದ.ಕ.ಜಿ.ಪ.ಹಿ.ಪ್ರಾ.ಶಾಲೆಯಲ್ಲಿ ಶಿಶು ಅಭಿವೃದ್ದಿ ಯೋಜನೆಯ ಕಿಶೋರಿ ಶಕ್ತಿ ತರಭೇತಿ ಕಾರ್ಯಕ್ರಮವನ್ನು ಗೋಳ್ತಮಜಲು ಗ್ರಾ.ಪಂ.ಉಪಾಧ್ಯಕ್ಷ ಕೆ.ಮುಸ್ತಾಪ ಉದ್ಘಾಟಿಸಿದರು.
IMG_8369
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮಿ ಮಾತನಾಡಿ ಕಿಶೋರಿಯರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಸಂದರ್ಭ ಸಹಜವಾಗಿರುವ ಗೊಂದಲಗಳನ್ನು ನಿವಾರಿಸುವ ಮತ್ತು ಮಾನಸಿಕ ಸ್ಥೆರ್ಯವನ್ನು ತುಂಬುವ ಕೆಲಸ ಇಂತಹ ತರಬೇತಿಗಳಿಂದ ಮಾತ್ರ ಸಾಧ್ಯ ಎಂದರು. ಕಿಶೋರಿಯರು ಕ್ರೀಯಾಶೀಲರಾಗಲು ಹಾಗೂ ಸಂಘಟನಾತ್ಮಕವಾಗಿ ಬೆಳಯಲು ಕೂಡಾ ಈ ವಾತವರಣ ಪೂರಕವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ತಾ.ಪಂ.ಸದಸ್ಯ ಮಹಾಬಲ ಆಳ್ವ, ಗ್ರಾ.ಪಂ. ಸದಸ್ಯರಾದ ಶೇಖರ ಕೊಟ್ಟಾರಿ, ಮೋನಪ್ಪ ದೇವಸ್ಯ, ಶಾಲಾ ಮುಖ್ಯೋಪದ್ಯಾಯರಾದ ಗೋಪಾಲ ಮತ್ತು ಮೇಲ್ವಿಚಾರಕಿ ಪುಷ್ಪಲತಾ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಶಾಲಿನಿ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *