ಮೂಡುಬಿದರೆ: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಜಾತಿ ಅಸ್ಪ್ರಶ್ಯತೆ, ದೇವಸ್ಥಾನಗಳಲ್ಲಿ ಮಡೆ ಮಡೆಸ್ತಾನ, ಪಂಕ್ತಿಬೇಧ ಮತ್ತಿತರ ಸಾಮಾಜಿಕ ಪಿಡುಗುಗಳನ್ನು ನಿಷೇಧಿಸುವ ಕುರಿತು ಮೂಡುಬಿದರೆಯ ದಲಿತ ಹಕ್ಕುಗಳ ಸಮಿತಿ ಬುಧವಾರ ಮೂಡುಬಿದರೆ ಉಪತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.

mbd_april14_2
ಸಾಮಾಜಿಕ ಅಸಮಾನತೆಯಿಂದಾಗಿ ದಲಿತರು ನಿತ್ಯ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಈ ಬಗ್ಗೆ ಡಾ.ಬಿ.ಆರ್ ಅಂಬೇಡ್ಕರ್ ಅವರ 126ನೇ ವರ್ಷಾಚರಣೆಯಲ್ಲಿರುವ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಮತ್ತು ದಲಿತ ಶೋಷಣಾ ಮುಕ್ತಿ ಮಂಚ್ ರಾಜ್ಯಾದ್ಯಂತ ಸಮಾನತಾ ಸಂಕಲ್ಪ ದಿನಾಚರಣೆಗೆ ಕರೆ ನೀಡಿದ್ದು ಈ ಬಗ್ಗೆ ಸರ್ಕಾರದ ಗಮನಸೆಳೆಯಲು ಹೋರಾಟ ನಡೆಸಲಾಗುವುದು ಎಂದು ದಲಿತ ಹಕ್ಕುಗಳ ಮೂಡುಬಿದಿರೆ ಸಮಿತಿ ಅಧ್ಯಕ್ಷ ಶಂಕರ ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸಲ್ಲಿಕೆ ವೇಳೆ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಕೊಣಾಜೆ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *