ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಬಂಟ್ವಾಳ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್ ಅವರ ಬೊಲೆರೊ ವಾಹನವನ್ನು ಗುರುವಾರ ರಾತ್ರಿ ಕಾವಳಕಟ್ಟೆಯಿಂದ ಕಳವುಗೈದ ಘಟನೆ ಸಂಭವಿಸಿದೆ.ಸಾಲಿಯಾನ್ ಅವರು ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಕಾವಳಕಟ್ಟೆ ದೈವಸ್ಥಾನ ಸಮೀಪ ತಮ್ಮ ವಾಹನವನ್ನಿರಿಸಿ ಧರ್ಮಸ್ಥಳಕ್ಕೆ ತೆರಳಿದ್ದರು. ರಾತ್ರಿ ಸುಮಾರು 2.30 ಗಂಟೆಯ ಹೊತ್ತಿಗೆ ಮರಳಿ ಬಂದಾಗ ಬೊಲೆರೊ ಕಾಣೆಯಾಗಿತ್ತು. ಘಟನೆ ಕುರಿತು ಪುಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಅವರು ದೂರು ನೀಡಿದ್ದು ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *