ಬಂಟ್ವಾಳ : ಪಜೀರು ಕಂಬ್ಲಪದವು ಶಾಲಾ ವಠಾರದಲ್ಲಿ ಲಯನ್ ಲೋಕನಾಥ ಶೆಟ್ಟಿಯವರ ಸತತ 31ನೇ ವರ್ಷದ ಕಟೀಲು ಮೇಳದ ದೇವಿಮಹಾತ್ಮೆ ಬಯಲಾಟದ ಸಂದರ್ಭದಲ್ಲಿ ಯಕ್ಷಧ್ರುವ ಭಾಗವತ ಪಟ್ಲ ಸತೀಶ್ ಶೆಟ್ಟಿಯವರನ್ನು ಪಟ್ಲ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು. ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಾತೃಮಂಡಳಿ ಅಧ್ಯಕ್ಷೆ ವಸಂತಿ ಲೋಕನಾಥ ಶೆಟ್ಟಿ , ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿ ರ ವೀಂದ್ರ ಶೆಟ್ಟಿ, ರಾಧಾಕೃಷ್ಣ, ಜಯರಾಮ ಶೆಟ್ಟಿ, ಸಾಕೇತ, ಗಂಗಾಧರ, ಹರೀಶ್ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

