ಬಂಟ್ವಾಳ: ಸಜೀಪಮೂಡ ಗ್ರಾಮದ ನಗ್ರಿ ಅಂಗನವಾಡಿ ಕೇಂದ್ರಕ್ಕೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜುರಾದ ಕಟ್ಟಡಕ್ಕೆ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಶಿಲಾನ್ಯಾಸಗೈದರು.
ಈ ಸಂದರ್ಭ ತಾ.ಪಂ. ಸದಸ್ಯರುಗಳಾದ ಸಂಜೀವ ಪೂಜಾರಿ, ಅಬ್ಬಾಸ್ ಆಲಿ, ಪಂ. ಅಧ್ಯಕ್ಷರಾದ ಗಣಪತಿ ಭಟ್, ಪಂ. ಅಭಿವೃದ್ಧಿ ಅಧಿಕಾರಿ ನಿರ್ಮಲ, ಸಿಡಿಪಿಓ ಮೇಲ್ವಿಚಾರಕಿ ಭಾರತಿ, ಇಂಜಿನಿಯರ್ ರಾಜ್ಕುಮಾರ್, ಕಟ್ಟಡ ಗುತಿಗೆದಾರ ರತ್ನಾಕರ್, ಪಂ. ಉಪಾಧ್ಯಕ್ಷರು, ಸದಸ್ಯರು ಮತ್ತಿತರರು ಉಪಸ್ಥಿತರದ್ದರು.
