ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಉಪ ಖಜಾನೆ ಭದ್ರತಾ ಕೊಠಡಿಯಲ್ಲಿ ಇಟ್ಟಿರುವ ದ್ವಿತೀಯ ಪಿಯೂಸಿ ರಸಾಯನ ಶಾಸ್ತ್ರ ವಿಭಾಗದ ಪ್ರಶ್ನೆಪತ್ರಿಕೆ ಪೊಟ್ಟಣವನ್ನು ಸರ್ಕಾರದ ಆದೇಶದಂತೆ ಸಹಾಯಕ ಆಯುಕ್ತ ಡಾ.ಅಶೋಕ್ ನೇತೃತ್ವದ ಅಧಿಕಾರಿಗಳ ತಂಡವು ಶುಕ್ರವಾರ ದಿನವಿಡೀ ಪರಿಶೀಲನೆ ನಡೆಸಿದರು.
ತಹಶೀಲ್ದಾರ್ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಡಿವೈಎಸ್ಪಿ ಭಾಸ್ಕರ ರೈ, ಖಜಾನೆ ಅಧಿಕಾರಿ ಅನಿತಾ ಕಸ್ತೂರಿ, ಶಿಕ್ಷಣ ಸಯೋಜಕಿ ಸುಜಾತ, ಪ್ರಾಂಶುಪಾಲರಾದ ಪದ್ಮನಾಭ ರೈ, ಬಾಬು ಗಾಂವ್ಕರ್, ಉಪತಹಶೀಲ್ದಾರ್ ನಾರಾಯಣ ಪೂಜಾರಿ, ಪರಮೇಶ್ವರ ಮೊಯಿಲಿ, ಭಾಸ್ಕರ್, ಸಹಾಯಕ ಸದಾಶಿವ ಕೈಕಂಬ ಮತ್ತಿತರರು ಇದ್ದರು.
