ಮೂಡುಬಿದರೆ: ತೋಡಾರು ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ 6ನೇ ವಾರ್ಷಿಕ ಮಹಾ ಸಮ್ಮೇಳನದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಬೃಹತ್ ದ್ಸಿಕ್ರ್ ವiಜ್ಲಿಸ್, ಸೆಮಿನಾರ್‍ಗಳನ್ನು ಏರ್ಪಡಿಸಿದ್ದು, ಸಯ್ಯಿದ್ ಅಲಿ ತಂಙಳ್ ಕುಂಬೋಳ್‍ರವರು ದುಃಆ ನಿರ್ವಹಿಸಿ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ. ಸರ್ವ ಕಾಲಕ್ಕೂ ಅನ್ವಯವಾಗುವಂತಹಾ ಸೇವಾ ಮನೋಭಾವ ಇರುವಂತಹಾ ಶಿಕ್ಷಿತ ವರ್ಗವು ಈ ಸಂಸ್ಥೆಯಿಂದ ಉದಯಿಸಲಿ ಎಂದು ಪ್ರಾರ್ಥಿಸಿದರು.
mbd_march28_3ಸಂಸ್ಥೆಯ ಅದ್ಯಕ್ಷ ಕೆ.ಎಂ. ಉಸ್ಮಾನುಲ್ ಫೈಝೀ ತೋಡಾರು ಮಾತನಾಡಿ ಸಂಸ್ಥೆಯ ವಿಧ್ಯಾರ್ಥಿಗಳು ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣ ಕಲಿತು ಸಮುದಾಯಕ್ಕೆ ಮತ್ತು ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವಾರಂಗದಲ್ಲಿ ಉನ್ನತ ಸಾಧನೆಗೈಯಲ್ಪಟ್ಟು ಸಮಾಜದಲ್ಲಿ ಗುರುತಿಸಲ್ಪಟ್ಟಿರುವ ಶಬ್ಬೀರಿಯಾ ಅರಬಿಕ್ ಕಾಲೇಜು ಕಾರ್ಕಳ ಇದರ ಸ್ಥಾಪಕ ಬಹು ಶಬೀರ್ ಹಾಜಿರವರಿಗೆ ಸಂಸ್ಥೆಯು ನೀಡುವ ಶಂಸುಲ್ ಉಲಮಾ ಅವಾರ್ಡ್ 2015-16 ನೀಡಿ ಗೌರವಿಸಲಾಯಿತು.ಅಂತರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರ ಬ್ರಿಟನ್ ಅರಬ್ ರಾಷ್ಟ್ರ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗÀಳಲ್ಲಿ ಇಸ್ಲಾಮೀ ಪ್ರಭೋಧನೆ ನಡೆಸುತ್ತಿರುವ ಬಹು ಬಾಷಾ ವಾಗ್ಮಿ ಬಹು ಸಿಂಸಾರುಲ್ ಹಖ್ ಹುದವಿ ಅಬುದಾಭಿ ಮುಖ್ಯ ಪ್ರಭಾಷಣಗೈದರು.ವೇದಿಕೆಯಲ್ಲಿ ಸಯ್ಯಿದ್ ಕರಾವಳಿ ತಂಙಳ್,ಸಯ್ಯದ್ ಶರಫುದ್ದೀನ್ ತಂಙಳ್,ಸಯ್ಯಿದ್ ಅಮೀರ್ ತಂಙಳ್,ಸಂಸ್ಥೆಯ ಉಪಾದ್ಯಕ್ಷರಾದ ಬಿ ಎಂ ಕೆ ಮುಹಿಯುದ್ದೀನ್ ಹಾಜಿ,ಪ್ರಾಂಶುಪಾಲರಾದ ರಫೀಖ್ ಹುದವಿ ಕೋಲಾರ, ಮಂಗಳೂರು ಮೂಡಾ ಅದ್ಯಕ್ಷ ಇಬ್ರಾಹಿಂ ಕೋಡಿಜಾಲ್, ತೋಡಾರು ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಎ,ಎಸ್ ಅಬೂಬಕ್ಕರ್, ಎಂಎಚ್ ಹಾಜಿ ಅಡ್ಡೂರು, ದುಬೈ ಸಮಿತಿಯ ನೂರುದ್ದೀನ್, ಸೇರಿದಂತೆ ಸಾಮಾಜಿಕ, ರಾಜಕೀಯ, ಧಾರ್ಮಿಕ ನಾಯಕರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜನಾಬ್ ಇಸ್ಹಾಕ್ ಹಾಜಿ ಸ್ವಾಗತಿಸಿದರು. ವಿಧ್ಯಾರ್ಥಿಗಳಾದ ಅಹ್ಮದ್ ನಯಿಂ ಮುಕ್ವೆ, ಸಫ್ವಾನ್ ಸುಂಕದಕಟ್ಟೆ ಕಾರ್ಯಕ್ರಮ ನಿರೂಪಿಸಿ ಸಂಸ್ಥೆಯ ಸಂಚಾಲಕ ಜನಾಬ್ ಸಲೀಂ ಹಂಡೇಲ್ ವಂದಿಸಿದರು.

By suddi9

Leave a Reply

Your email address will not be published. Required fields are marked *