ಕೈಕಂಬ: ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ಮಾ.7 ಸೋಮವಾರದಿಂದ ಮಾ.9 ಬುಧವಾರದವರೆಗೆ ಮಹಾ ಶಿವರಾತ್ರಿ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಿರಾಜ ಸಂದ್ಯಾನಾಥ್ ಮಹಾರಾಜ್ ಜೋಗಿಮಠ ಕದ್ರಿ ಇವರ ದಿವ್ಯ ಉಪಸ್ಥಿ ಮತ್ತು ಆಶೀರ್ವಾದಗಳೊಂದಿಗೆ ಹಾಗೂ ಬ್ರಹ್ಮಶ್ರೀ ದೇರೆಬೈಲು ವಿಠಲದಾಸ ತಂತ್ರಿಗಳು ಶ್ರೀ ಕ್ಷೇತ್ರ ಕದ್ರಿ ಇವರ ನೇತೃತ್ವದಲ್ಲಿ ನಡೆಯಲಿರುವುದು.

mattiಧಾರ್ಮಿಕ ಕಾರ್ಯಕ್ರಮಗಳು:
ಫೆ.7ರಂದು ಸೋಮವಾರ ಬೆಳಿಗ್ಗೆ 5.45ಕ್ಕೆ ಸಾಮೂಹಿಕ ಪ್ರಾರ್ಥನೆ, ದೇವರ ಪೂಜೆ, 6ಗಂಟೆಗೆ ಜ್ಯೋತಿ ಪ್ರಜ್ವಲನೆ, ಏಕಾಹ ಭಜನೆ ಪ್ರಾರಂಭ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಅನ್ನಪ್ರಸಾದ ಭೋಜನ, ರಾತ್ರಿ 8.30ರಿಂದ ಮಹಾಪೂಜೆ, ಉಪಹಾರ, ರಾತ್ರಿ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ.
ಫೆ.8 ಮಂಗಳವಾರ ಬೆಳಿಗ್ಗೆ 6.30ಕ್ಕೆ ಏಕಾಹ ಭಜನಾ ಮಂಗಳೋತ್ಸವ, 8ಗಂಟೆಗೆ ದೇವರ ಪೂಜೆ, 8.30ಕ್ಕೆ ಮಹಿಷಂದಾಯ, ಧೂಮಾವತಿ ಬಂಟ ದೈವಗಳ ಭಂಡಾರ ಏರುವುದು, 9ಗಂಟೆಗೆ ಗಣಹೋಮ, 10ರಿಂದ ಶತ ರುದ್ರಾಭಿಷೇಕ ಕಾಲಭೈರವ ದೇವರಿಗೆ ರೋಟ್‍ಪೂಜೆ ಪಂಚಾಮೃತ ಅಭಿಷೇಕ ಜ್ವಾಲಾ ಮಹಾಮ್ಮಾಯಿಗೆ ಹೂವಿನಪೂಜೆ ಕುಂಕುಮಾರ್ಚನೆ. ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ 8ರಿಂದ ಮಹಾಪೂಜೆ, ಪ್ರಸಾದ ವಿತರಣೆ, 9.00ರಿಂದ ಮಹಿಷಂದಾಯ, ಧೂಮಾವತಿ-ಬಂಟ ದೈವಗಳ ನೇಮೋತ್ಸವವು ನಡೆಯಲಿದೆ.
ಫೆ.9ರಂದು ಬುಧವಾರ ರಾತ್ರಿ 8.00ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. 10.00ರಿಂದ ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲಬಲಿ ಸೇವೆ ಜರಗಲಿರುವುದು.

By suddi9

Leave a Reply

Your email address will not be published. Required fields are marked *