ಬಂಟ್ವಾಳ: ಬಿಂಬ ಹಾಗೂ ಪ್ರತಿಬಿಂಬದ ಭಾವವೇ ದೇವಾಲಯ. ಬಿಂಬ ದೇವರು ಪ್ರತಿಬಿಂಬ ನಾವು. ಬಿಂಬಕ್ಕೆ ಉತ್ತಮವಾದ ಸ್ಥಾನಮಾನವನ್ನು ನೀಡಿದರೆ ಪ್ರತಿಬಿಂಬವಾದ ನಾವು ಉತ್ತಮ ಸ್ಥಾನಮಾನವನ್ನು ಹೊಂದಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಅನುವಂಶಿಕ ಅರ್ಚಕ ಕಮಲಾದೇವಿಪ್ರಸಾದ್ ಅಸ್ರಣ್ಣ ಹೇಳಿದರು.
ಬಂಟ್ವಾಳ ಕಸ್ಬಾ ಗ್ರಾಮದ ಶ್ರೀ ದುರ್ಗಾಂಬಾ ದೇವಸ್ಥಾನ ಟ್ರಸ್ಟ್ ವತಿಯಿಂದ ಪಣೆಕಲದಲ್ಲಿ ಜೀಣೋದ್ದಾರಗೊಳ್ಳುತ್ತಿರುವ ಶ್ರೀ ದುರ್ಗಾಂಬಾ ದೇವಸ್ಥಾನಕ್ಕೆ ಗುರುವಾರ ಮಧ್ಯಾಹ್ನ 12.05ರ ಶುಭ ಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಒಂದು ಮಹಾನ್ ಶಕ್ತಿ ನಿರ್ಮಾಣವಾಗಬೇಕಾದರೆ ಅನೇಕ ಶಕ್ತಿಗಳ ಸಂಚಯನವಾಗ ಬೇಕು. ಇಲ್ಲಿಯೂ ಅನೇಕ ಶಕ್ತಿಗಳು ಒಟ್ಟುಗೂಡಿ ಒಂದು ಮಹಾನ್ ಶಕ್ತಿ ರೂಪುಗೊಂಡಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ ತುಳುನಾಡಿನ ಮಣ್ಣೇ ಪ್ರಸಾದ. ಇಲ್ಲಿ ಇರುವಷ್ಟು ನಾಗರಾಧನೆ ಹಾಗೂ ದೇವತಾರಾಧನೆಗಳನ್ನು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಭಕ್ತಿ, ಶ್ರದ್ದೆ, ಒಗ್ಗಟ್ಟು ಜೊತೆಸೇರಿದಾಗ ಯಾವುದೇ ಕಷ್ಟದ ಕೆಲಸವು ಸುಲಭ ಸಾಧ್ಯವಾಗುತ್ತದೆ ಎಂದರು. ಜೀಣೋದ್ದಾರ ಸಮಿತಿಯ ಗೌರವಾದ್ಯಕ್ಷ ಬಿ.ನಾಗೇಂದ್ರ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ತುಂಗಪ್ಪ ಬಂಗೇರಾ ಮಾತನಾಡಿದರು. ಜೀಣೋದ್ದಾರ ಸಮಿತಿ ಗೌರವಾಧ್ಯಕ್ಷ ಸೇಸಪ್ಪ ಕೋಟ್ಯಾನ್ ಅಧ್ಯಕ್ಷ ಪದ್ಮಶೇಖರ ಜೈನ್, ವಸಂತ ಭಟ್ ಪಣೆಕಲ, ಆಡಳಿತ ಸಮಿತಿ ಅಧ್ಯಕ್ಷ ದಿನೇಶ್ ಪೂಜರಿ ಪಣೆಕಲ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಜಕ್ರಿಬೆಟ್ಟು , ಗೌರವ ಸಲಹೆಗಾರ ಬಸ್ತಿ ಸದಾಶಿವ ಶೆಣೈ ವೇದಿಕೆಯಲ್ಲಿದ್ದರು. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಪ್ರಗತಿಪರ ಕೃಷಿಕ ರಾಜೇಶ್‍ನಾೈಕ್ ಉಳಿಪಾಡಿಗುತ್ತು, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ಆನಂದ ಶಿಲಾನ್ಯಾಸದ ಸಂದರ್ಭ ಉಪಸ್ಥಿತರಿದ್ದರು.
ದೀಕ್ಷಿತ್ ಪೂಜಾರಿ ಸ್ವಾಗತಿಸಿ, ಆಡಳಿತ ಮಂಡಳಿ ಕಾರ್ಯದರ್ಶಿ ಮಹಾಬಲ ಬಂಗೇರ ಪ್ರಾಸ್ತಾವಿಕವಾಗಿ ಮಾತನಡಿದರು. ಗಣೇಶ್ ಪೂಜಾರಿ ಮಣಿ ವಂದಿಸಿದರು. ರಂಗ ಕಲಾವಿದ ಎಚ್ಕೆ ನಯನಾಡು ನಿರೂಪಿಸಿದರು
