ಮೂಡುಬಿದರೆ: ಪೇಟೆಯಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ಸರ್ವರ್ಡೌನ್ ಸಮಸ್ಯೆಯಿಂದ ಸೇವೆ ಸ್ಥಗಿತಗೊಂಡಿದೆ. ಕಚೇರಿಯ ಸಿಬ್ಬಂದಿಗಳು ಸೂಕ್ತ ಮಾಹಿತಿ ನೀಡದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ. ಅವ್ಯವಸ್ಥೆಗಳಿಂದ ತಾಂಡವಾಡುತ್ತಿರುವ ಮೂಡುಬಿದರೆ ಉಪನೋಂದಾಣಾಧಿಕಾರಿಗಳ ಕಚೇರಿಯಲ್ಲಿ ಕಳೆದ ಗುರುವಾರದಿಂದ ಸರ್ವರ್ಡೌನ್ ಸಮಸ್ಯೆಯಿಂದ ಕೆಲಸಕಾರ್ಯಗಳು ಸ್ಥಗಿತಗೊಂಡಿದ್ದು, ಅಗತ್ಯ ನೋಂದಣಿಗೆ ಬರುವ ನಾಗರಿಕರು ಕಂಗಾಲಾಗಿದ್ದಾರೆ. ಸಿಬ್ಬಂದಿಗಳಲ್ಲಿ ಮಾಹಿತಿ ಕೇಳಿದರೆ, `ಯಾವಾಗ ಸರಿಯಾಗುತ್ತದೆ ಗೊತ್ತಿಲ್ಲ’ ಎಂಬ ಮಾಹಿತಿ ಬರುತ್ತದೆ. ದಾಖಲೆಗಳ ಅಗತ್ಯ ನೊಂದಣಿ ಮಾಡಿಸಲು ಬರುವ ಸಂದರ್ಭದಲ್ಲಿ ಸೇವೆ ಸಿಗದಿದ್ದರೆ ಯಾರ ಬಳಿ ಕೇಳುವುದು ಎಂದು ಜನರು ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ ನೋಂದಣಿ ಕೆಲಸ ಮಾಡಿಸಿಕೊಳ್ಳಲು ಬಂದ 75ರ ಹರೆಯದ ಮಹಿಳೆಯೊಬ್ಬರು ಕಚೇರಿ ಮುಂದೆ ಪ್ರಜ್ಞೆ ಬಿದ್ದಿದ್ದರು. ನೋಂದಣಿ ಬಳಿಕ ಮುಂಬೈ, ಬೆಂಗಳೂರು ಮುಂತಾದ ಕಡೆ ತೆರಳಬೇಕಾಗಿರುವವರು ಕೂಡ ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಕುಳಿಕೊಳ್ಳಲು ಸರಿಯಾದ ವ್ಯವಸ್ಥೆ, ಬೀಗ ಜಡಿದಿರುವ ಶೌಚಾಲಯದಿಂದಾಗಿ ಮಹಿಳೆಯರು, ಮಕ್ಕಳು ಪರದಾಡುವಂತಾಗಿದೆ.
22mood sub registerd

22 mood sub registerd (1)
ಅಧಿಕಾರಿಗಳ ನಂಬರ್ ಗೊತ್ತಿಲ್ಲ:
ಕಚೇರಿಯ ಅವ್ಯವಸ್ಥೆಗಳ ಬಗ್ಗೆ ನಾವು ಇಲ್ಲಿನ ಅಧಿಕಾರಿಗಳಲ್ಲಿ ವಿಚಾರಿಸುತ್ತೇವೆ. ಅವರ ದೂರವಾಣಿ ನಂಬರ್ ಕೊಡಿ ಎಂದು ನಾಗರಿಕರು ಕೇಳಿದರೆ, `ಅವರ ಮೊಬೈಲ್ ನಂಬರ್ ಗೊತ್ತಿಲ್ಲ’ ಎಂಬ ಉತ್ತರವೂ ಸಿಬ್ಬಂದಿಗಳಿಂದ ಬಂದಿದೆ. ಕಚೇರಿಯ ಹೊರಭಾಗದಲ್ಲಿ ಹಾಕಲಾಗಿರುವ ಸೂಚನ ಫಲಕದಲ್ಲಿ ಪೊಲೀಸ್ ಹಾಗೂ ಇತರ ತುತರ್ು ದೂರವಾಣಿ ಸಂಖ್ಯೆ ಇದೆಯೇ ಹೊರತು, ಕಚೇರಿಯ ಅಧಿಕಾರಿ, ಇಲ್ಲವೇ ಮೇಲಾಧಿಕಾರಿಗಳದೂರವಾಣಿ ಸಂಖ್ಯೆಯನ್ನು ಲಗತ್ತಿಸಿಲ್ಲ. ಹೇಗೋ ಬೆಂಗಳೂರಿನ ಕಚೇರಿಯ ಸಂಖ್ಯೆಯನ್ನು ಪಡೆದು, ಅದನ್ನು ಸಂಪಕರ್ಿಸಿದಾಗ, ಕಾಲ್ ರಿಸೀವ್ ಮಾಡದೇ ಇರುವುದು ಕೂಡ ಮೂಡುಬಿದರೆ ನಾಗರಿಕರನ್ನು ಆಕ್ರೋಶಿತರನ್ನಾಗಿಸಿದೆ.
ನೋಂದಣಿ ಕಚೇರಿಯ ಅವ್ಯವಸ್ಥೆಗಳ ಕುರಿತು ಜನರು ಮಾಧ್ಯಮದವರಿಗೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಮಾಹಿತಿ ರವಾನೆ ಮಾಡಿದ್ದು, ಇದರಿಂದ ಎಚ್ಚೆತ್ತ ಸಿಬ್ಬಂದಿಗಳು, ಸೋಮವಾರ ಮಧ್ಯಾಹ್ನ 1 ಗಂಟೆಯ ವೇಳೆ ಸೂಚನೆ ಪ್ರತಿಯನ್ನು ಬಾಗಿಲಿಗೆ ಅಂಟಿಸಿದ್ದಾರೆ. `ತಾಂತ್ರಿಕ ದೋಷದಿಂದ ಗಣಕೀಕರಣದಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿರುತ್ತದೆ’ ಎಂಬ ಮಾಹಿತಿಯನ್ನೊಳಗೊಂಡ ಪ್ರತಿಯನ್ನು ಅಂಟಿಸಿದ್ದು, ಕಚೇರಿಯ ಹೊರಗಡೆ ಗೋಡೆಗೆ ಅಂಟಿಸಿದ ಪ್ರತಿಯು ಕೆಲವೇ ನಿಮಿಷದಲ್ಲಿ ನೆಲದ ಮೇಲಿರುವುದು ಕಂಡುಬಂತು.

ಉಪನೋಂದಾಣಾಧಿಕಾರಿಗಳ ಕಚೇರಿಯ ಅವ್ಯವಸ್ಥೆಯಿಂದಾಗಿ ನಾವು ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದು, ಕೇಳುವವರು ಯಾರೂ ಇಲ್ಲದಂತಾಗಿದೆ. ಅಧಿಕಾರಿ ಬಳಿ ಕೇಳೋಣವೆಂದರೆ ಅವರು ಕಚೇರಿಯಲಿಲ್ಲ. ಸಿಬ್ಬಂದಿಗಳು ವಿಚಾರಿಸಿದಾಗ ಉಡಾಫೆಯ ಉತ್ತರ ಕೇಳಿಬರುತ್ತದೆ.
– ಪುರುಷೋತ್ತಮ, ನಾಗರಿಕ

By suddi9

Leave a Reply

Your email address will not be published. Required fields are marked *