ಕೈಕಂಬ: ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕೊನೆಯ ಹಂತ ಎಂಬಂತೆ ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಅಭ್ಯರ್ಥಿ ಪದ್ಮನಾಭ ಕೊಟ್ಟಾರಿ ಹಾಗೂ ಕರಿಯಂಗಳ ಕ್ಷೇತ್ರದ ತಾ, ಪಂ, ಅಭ್ಯರ್ಥಿ ಯಶವಂತ ಪೂಜಾರಿ ಪರವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮನೆಮನೆಗೆ ತೆರಳಿ ಬಿರುಸಿನ ಮತಪ್ರಚಾರ ನಡೆಸಿದ್ದಾರೆ. ಬಡಗಬೆಳ್ಳೂರಿನ ಮನೆಮನೆಗೆ ತೆರಳಿದ ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಪಕ್ಷದ ಪದ್ಮನಾಭ ಕೊಟ್ಟಾರಿಯವರಿಗೆ ಮತ ನೀಡುವಂತೆ ಕೇಳಿಕೊಂಡರು.

 

IMG-20160218-WA0014

 

IMG-20160218-WA0015

 

 

IMG-20160218-WA0016

 

 

ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ  ಜಿ.ಆನಂದ, ಪ್ರಧಾನ ಕಾಯದರ್ಶಿ  ದೇವಪ್ಪ ಪೂಜಾರಿ,  ಮಹಬಲ ಶೆಟ್ಟಿ,  ಸವಿತಾ  ಶೆಟ್ಟಿ , ವೇದವತಿ, ರಮೇಶ್ ಬಟ್ಟಾಜೆ, ಸಂಧೀಪ್,  ಪ್ರಕಾಶ್ ಮತ್ತಿತರರು
ಫೆ.20ರಂದು ಮತದಾನ ನಡೆಯಲಿದ್ದು, ಪದ್ಮನಾಭ ಕೊಟ್ಟಾರಿಯವರ ವಿರುದ್ಧ ಕಾಂಗ್ರೆಸ್‍ನಿಂದ ಚಂದ್ರಪ್ರಕಾಶ್ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಉಂಟಾಗಿದ್ದು, ಯಾರ ಕೊರಳಿಗೆ ವಿಜಯಮಾಲೆ ಬೀಳಲಿದೆ ಎಂಬ ಕುತೂಹಲ ಉಂಟಾಗಿದೆ.

 

 

 

 

By suddi9

Leave a Reply

Your email address will not be published. Required fields are marked *