ಮಂಗಳೂರು: ಮಹಿಳೆಯರನ್ನು ಸಬಲೀಕರಣದ ಜೊತೆಗೆ ಸಾಂಸ್ಕ್ರತಿಕವಾಗಿ ಬೆಂಬಲಿಸುವ ಸಲುವಾಗಿ ಸಾಂಸ್ಕ್ರತಿಕ ಸ್ಪರ್ಧೆಗಳನ್ನು ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇ.ಆರ್.ಡಬ್ಲ್ಯೂ.ಸಿ ಯೋಜನೆಯಡಿಯ ಪ್ರೇರಣಾ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ವಲಯ ಮಟ್ಟದಲ್ಲಿ ಸ್ಪರ್ಧೆಗಳನ್ನು ಆಯೋಜಿಸಿ ಅಂತರ್ವಲಯ ಸಾಂಸ್ಕ್ರತಿಕ ಸ್ಪರ್ಧಾಕೂಟವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರೊ.ಹಿಲ್ಡಾ ರಾಯಪ್ಪನ್ ಹಾಗೂ ಯೋಜನಾ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್ರವರು ಉಪಸ್ಥಿತರಿದ್ದರು. ಕೈಕಂಬ, ನೀರ್ಮಾರ್ಗ ಹಾಗೂ ತೊಕ್ಕೊಟ್ಟು ವಲಯಗಳ ಸದಸ್ಯರು ಜಾಗೃತಿ ಹಾಡು, ಜಾನಪದ ನೃತ್ಯ, ಕಿರು ಹಾಸ್ಯನಾಟಕ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

