ಮುಂಬಯಿ, ಫೆ.15: ಜಿ.ಎಸ್.ಬಿ ಮಂಡಳ ಡೊಂಬಿವಲಿ ತನ್ನ ಎಂಂಟನೇ ವಾರ್ಷಿಕ ಮಾಘಿ ಗಣಪತಿ ಉತ್ಸವವನ್ನು ಕಳೆದ ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಿತು.
ಅಂದು ಡೊಂಬಿವಲಿ ಪೂರ್ವದ ಅಂಬಿಕಾ ನಗರದ ಗೊಗ್ರಸ್‍ವಾಡಿ ಅಲ್ಲಿನ ಸ್ವಯಂವರ ಸಭಾಗೃಹದಲ್ಲಿ ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾರೀ ವಿಜೃಂಭಣೆಯಿಂದ ಮಾಘಿ ಗಣಪತಿ ಉತ್ಸವ ಸಂಭ್ರಮಿಸಲಾಯಿತು. ಗೊಗ್ರಸ್‍ವಾಡಿ ಅಲ್ಲಿನ ಜಿ.ಎಸ್.ಬಿ ಮಂಡಳ ಶಾಲೆಯಿಂದ ಕುಂದಾಪುರದ ಅವೇ ಮಣ್ಣಿನಲ್ಲಿ ಮಂಗಳೂರಿನ ಕಲಾಕಾರ ಕಿಶೋರ್ ಪೈ ತಯಾರಿಸಿದ ಗಣಪತಿ ಮೂರ್ತಿಯನ್ನು ರಥದಲ್ಲಿ ಸ್ವಯಂವರ ಸಭಾಗೃಹ ತರಲಾಯಿತು.
ಮುಂಜಾನೆ ಸಾಮೂಹಿಕ ಪಾರ್ಥನೆ, ಪ್ರಾಣ ಪ್ರತಿಷ್ಠೆ, ಬೆಳಿಗ್ಗೆ ಗಣಹೊಮೆ, ತುಲಾಭಾರ, ವಧ್ಯಾಹ್ನ ಮುಡಗಣಪತಿ ಸೇವೆ, ಮಹಾ ಅನ್ನಸಂತರ್ಪಣೆ, ಸಂಜೆ ರಂಗಪೂಜೆ ಬಳಿಕ ರಾತ್ರಿಪೂಜೆ ನಂತರ ಗಣಪತಿ ವಿಸರ್ಜನಾ ಪೂಜೆ ನೆರವೇರಿಸಲ್ಪಟ್ಟಿತು.
ವೇದಮೂರ್ತಿ ಶ್ರೀ ಮೋಹನದಾಸ್ ಭಟ್ ಪೂಜಾ ಕೈಂಕರ್ಯಗಳನ್ನು ಜರುಗಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ನಂತರ ಭವ್ಯ ಮೆರವಣಿಗೆಯಲ್ಲಿ ಡೊಂಬಿವಲಿ ಅಲ್ಲಿನ ಎಂಐಡಿಸಿ ಕೆರೆಯಲ್ಲಿ ಮೂರ್ತಿಯನ್ನು ಜಲ ಸ್ಥಮ್ಭನ ಮಾಡಲಾಯಿತು.
ಈ ಸಂದರ್ಭ ದಲ್ಲಿ ಸಮಿತಿಯ ಸದಸ್ಯರಲ್ಲದೆ ಡೊಂಬಿವಲಿ, ಕಲ್ಯಾಣ್ ಮತ್ತು ಪರಊರ ಭಕ್ತಾಭಿಮಾನಿ ಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಗಳನ್ನೂ ನೆರÀವೇರಿಸುವಂತೆ ಕೋರುತ್ತಾ ಶ್ರೀ ಗಣಪತಿ ದೇವರ ಗಂಧಪ್ರಸಾದ ಸ್ವೀಕರಿಸಿ ಧÀನ್ಯರಾದರು.


