ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘದ ವಕ್ತಾರ, ಉಪವಾಸ ಸತ್ಯಾಗ್ರಹಗಳಿಂದಾಗಿ ಜಿಲ್ಲೆಯಲ್ಲೇ ಗಮನಸೆಳೆರುವ ಸುದತ್ತ ಜೈನ್ ಶಿರ್ತಾಡಿ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಶ್ರೀ ರಾಮಸೇನೆಯಲ್ಲೂ ಗುರುತಿಸಿಕೊಂಡಿರುವ ಸುದತ್ತ ಜೈನ್, ಕಾರ್ಮಿಕ ಆಸ್ಪತ್ರೆ, ಅಲ್ಲಿನ ಅವ್ಯವಸ್ಥೆಗಳು ಕುರಿತು, ಗಣಿಗಾರಿಕೆ ವಿರುದ್ಧ ಹೋರಾಟದಲ್ಲಿ ಗುರುತಿಸಿಕೊಂಡರು. ಅಖಿಲ ಭಾರತ ಕಾರ್ಮಿಕ ಸಂಘದ ಪದಾಧಿಕಾರಿಗಳನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆಗಿಳಿಸಿದ್ದಾರೆ.
mbd_feb14_5(sudatta Jain)
ಮಾಧ್ಯಮದ ಜೊತೆ ಮಾತನಾಡಿದ ಸುದತ್ತ ಜೈನ್, ಕಾರ್ಮಿಕ ಏಳಿಗೆಗಾಗಿ ಹಾಗೂ ಸಮಾಜದ ಅವ್ಯವಸ್ಥೆಗಳಿಗೆ ಧ್ವನಿಯಾಗಿ ಹಲವಾರು ಪ್ರತಿಭಟನೆಯನ್ನು ಮಾಡಿದ್ದೇನೆ. ನೇತ್ರಾವತಿ ಹೋರಾಟದಲ್ಲಿ ಕೈಜೋಡಿಸಿದ್ದು, ಅದರಲ್ಲಿ ಭಾಗವಹಿಸಿದ ಕೆಲವರ ನಡೆ ನನಗೆ ನಿರಾಸೆ ತಂದಿದೆ. ರಾಜಕೀಯ ಬಲವಿದ್ದರೆ ನನ್ನ ಹೋರಾಟವು ಮತ್ತಷ್ಟು ಪ್ರಬಲವಾಗುವ ಉದ್ದೇಶದಿಂದ ಕಾಂಗ್ರೆಸ್ಗೆ ಸೇರಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರೊಂದಿಗೂ ನನಗೆ ಉತ್ತಮ ಸಂಪರ್ಕವಿದೆ.ಆದರೆ ಬಿಜೆಪಿಯಲ್ಲಿಯ ಕೆಲವೊಂದು ನಡೆಯು ನನ್ನಲ್ಲಿ ಅಸಮಾಧಾನ ಉಂಟು ಮಾಡಿದೆ. ಕಾಂಗ್ರೆಸ್ನಲ್ಲಿ ಯುವನಾಯಕರಿಗೆ ಬೆಂಬಲ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಕಾರಣದಿಂದ ಕಾಂಗ್ರೆಸ್ಗೆ ಸೇರುತ್ತಿದ್ದೇನೆ ಎಂದಿದ್ದಾರೆ.

By suddi9

Leave a Reply

Your email address will not be published. Required fields are marked *