ಕೈಕಂಬ: ಬಿಜೆಪಿ ಪಕ್ಷದ ನೂತನ ನೂತನ ಶಾಖೆ ಗುರುಪುರ ಕೈಕಂಬದ ವಿನಾಯಕ ಕಾಂಪ್ಲೆಕ್ಸ್ನಲ್ಲಿ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ನೆರವೇರಿಸಿದರು.
ಉದ್ಘಾಟಿಸಿ ಮಾತಾಡಿದ ಅವರು ಮುಂದಿನ ತಾ.ಪಂ. ಹಾಗೂ ಜಿ.ಪಂ. ಚುನಾವಣೆಯಲ್ಲಿ ಕಾರ್ಯಕರ್ತರೆಲ್ಲಾ ತಮ್ಮ ಅಭ್ಯರ್ಥಿಗಳಾದ ದೋಗು ಪೂಜಾರಿ ಹಾಗೂ ಹರೀಶ್ ಕೆ. ಮೂಡುಶೆಡ್ಡೆ ಅವರನ್ನು ಗರಿಷ್ಠ ಮತಗಳಿಂದ ಗೆಲ್ಲಿಸಲು ಶ್ರಮಿಸುವಂತೆ ತನ್ನ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯಕ್ ಉಳಿಪಾಡಿಗುತ್ತು, ದೋಗು ಪೂಜಾರಿ, ವಿಶ್ವನಾಥ ಶೆಟ್ಟಿ, ಹರೀಶ್ ಕೆ. ಮೂಡುಶೆಡ್ಡೆ, ವಿಶ್ವನಾಥ ಶೆಟ್ಟಿ, ಕವಿತಾ ದಿನೇಶ್, ಜಯಪ್ರಕಾಶ್ ಭಂಡಾರಿ, ಚಿತ್ತಣ್ಣ ಶೆಟ್ಟಿ, ವಿನೋದ್ ಮಾಡ, ಕೇಶವ ಕೊಳಂಬೆ, ವಕೀಲ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ ಶೆಟ್ಟಿ ಪೆರ್ಮಂಕಿ ನಿರೂಪಿಸಿದರು.











