ಮೂಡುಬಿದಿರೆ: ಮೈಟ್ ಕಾಲೇಜಿನ ಅಂತಿಮ ಮೆಕ್ಯಾನಿಕಲ್ ವಿಭಾಗದ 30 ಜನ ವಿದ್ಯಾರ್ಥಿಗಳು ತಯಾರಿಸಿದ, `ಟೀಮ್ ಮೈಟ್ ರೇಸಿಂಗ್(ಟಿಎಂಆರ್), ರ್ಯಾಲಿ ಕಾರು ಫೆ.16ರಿಂದ 23ರವರೆಗೆ ಮಹಿಂದ್ರಾ ಕಂಪೆನಿ ಪ್ರಾಯೋಜಕತ್ವದಲ್ಲಿ ನಡೆಯಲಿರುವ `ಎಸ್ಎಇ-ಬಾಜಾ’ ರ್ಯಾಲಿಯಲ್ಲಿ ಭಾಗವಹಿಸಲಿದೆ. ಸುಮಾರು 154 ವಿವಿಧ ಮಾದರಿಯ ರ್ಯಾಲಿ ಕಾರು ಬಾಗವಹಿಸುವ ಈ ರ್ಯಾಲಿಯಲ್ಲಿ ಮೈಟ್ ಸಂಸ್ಥೆಯ ರೂ.7.5 ಲಕ್ಷ ವೆಚ್ಚದ ಕಾರು ತನ್ನದೇ ವೈಶಿಷ್ಟಗಳಿಂದ ಗಮನಸೆಳೆಯಲಿದೆ ಎಂದು ರಾಜಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ರಾಜೇಶ್ ಚೌಟ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2016ರ ಜನವರಿ ತಿಂಗಳಲ್ಲಿ ನೋಯ್ಡದಲ್ಲಿ ಬಾಜಾ ಸ್ಟೂಡೆಂಟ್ ಇಂಡಿಯ ಸಂಸ್ಥೆ ನಡೆಸಿದ ರ್ಯಾಲಿಯಲ್ಲಿ ಈ ಕಾರು `ಮೋಸ್ಟ್ ಪಾಪ್ಯುಲರ್ ಕಾರ್’ ಎನ್ನುವ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. 30ಮೀ. ಎರಡುತೊಡರು ಇರುವ ಟ್ರ್ಯಾಕ್ನಲ್ಲಿ ಸಲೀಸಾಗಿ ಚಲಿಸುವ ಸಾಮಥ್ರ್ಯವಿರುವ ಈ ಕಾರು, ರ್ಯಾಲಿಯಲ್ಲಿ ಬಂದಿದ್ದ 44 ಕಾರುಗಳಲ್ಲಿ 11ನೇ ಸ್ಥಾನವನ್ನು ಪಡೆದಿರುವುದು ಮೈಟ್ ಕಾರಿನ ಗುಣಮಟ್ಟ ಹಾಗೂ ಸಾಮಥ್ರ್ಯಕ್ಕೆ ಸಾಕ್ಷಿಯಾಗಿದೆ. ಈ ರ್ಯಾಲಿಯ ಬ್ಯುಸಿನೆಸ್ ಸ್ಕಿಲ್ ಅರ್ಹತೆಯಲ್ಲಿ 19ನೇ ಹಾಗೂ ವಿನ್ಯಾಸದಲ್ಲಿ 16ನೇ ಸ್ಥಾನ ಪಡೆದಿರುವುದು ಮತ್ತೊಂದು ಹೆಗ್ಗಳಿಕೆ ಎಂದು ಚೌಟ ತಿಳಿಸಿದ್ದಾರೆ.

ಮೈಟ್ ಕಾಲೇಜಿನ ಅಂತಿಮ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಅಶ್ವಿನ್ ಬಲರಾಮ್ ಅವರ ನೇತೃತ್ವದಲ್ಲಿ 30 ವಿದ್ಯಾರ್ಥಿಗಳು ನಿರ್ಮಿಸಿದ ಕಾರಿಗೆ 2015ರ ನವೆಂಬರ್ 2ರಂದು ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು. ರ್ಯಾಲಿಯಲ್ಲಿ ಕಾರಿನ ಸಾಮಥ್ರ್ಯಕ್ಕೆ ಪೂರಕವಾಗಿ ಸಯ್ಯದ್ ಸಫ್ವಾನ್, ಅರ್ಫಾನ್ ಖಾನ್, ಸಾಯಿ ನಾರಾಯಣ ಸಮರ್ಥವಾಗಿ ಚಲಾಯಿಸಿದ್ದಾರೆ. ವಿದ್ಯಾರ್ಥಿಗಳ ಅನ್ವೇಷನೆಯ ಇಚ್ಛೆಯನ್ನು ಅರಿತು, ಅವರಿಗೆ ಪ್ರಾಯೋಗಿಕವಾದ ಸೌಲಭ್ಯಗಳನ್ನು ನೀಡುತ್ತಿರುವ ಕಾರಣ, ಮೈಟ್ ಸಂಸ್ಥೆಯು ಟಿಎಂಆರ್ ಕಾರು ನಿರ್ಮಿಸಿದೆ. ಸಂಸ್ಥೆಯ ಈ ನಡೆ ಇಡೀ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಇತರ ಸಂಸ್ಥೆಗಳಿಗೆ ಹಾಗೂ ಅಲ್ಲಿನ ಸಂಶೋಧನೆಯಲ್ಲಿ ಉತ್ಸುಕರಿರುವ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ ಎಂದು ರಾಜೇಶ್ ಚೌಟ ಅಭಿಪ್ರಾಯಪಟ್ಟರು.
ಕಾರನ್ನು ಅನ್ವೇಷಣೆ ಮಾಡಿರುವ ತಂಡದಲ್ಲಿನ ಸದಸ್ಯ-ವಿದ್ಯಾರ್ಥಿಗಳಾದ ಅರ್ಫಾನ್ ಖಾನ್ ಹಾಗೂ ಹರೀಶ್ ಶೆಣೈ ಕಾರಿನ ತಾಂತ್ರಿಕ ವಿವರ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷೆ ಸವಿತಾ ಚೌಟ, ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಲ್ ಈಶ್ವರಯ್ಯ, ಉಪಪ್ರಾಂಶುಪಾಲ,ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಸಿ.ಆರ್ ರಾಜಶೇಖರ್, ಸಂಶೋಧನಾ ವಿಭಾಗದ ಡೀನ್ ಡಾ.ಗಣೇಶ್ ಐತಾಳ್, ಡೀನ್ ಡಾ.ನಾಗೇಶ್ ಎಚ್.ಕೆ, ಎಕ್ಸಾಂ ಡೀನ್ ಡಾ.ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.
