ಮೂಡುಬಿದಿರೆ: ಜಮೀಯ್ಯತ್ತುಲ್ ಫಲ್ಹಾಃ ಮೂಡುಬಿದಿರೆ ಹಾಗೂ ಜೆ.ಸಿ.ಐ ಮೂಡುಬಿದಿರೆ ತ್ರಿಭುವನ್ ಇದರ ಸಂಯುಕ್ತ ಆಶ್ರಯದಲ್ಲಿ ಕಳೆದ ಒಂದು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಶಿಬಿರ `ಗೆಲುವಿನ ಗುಟ್ಟು 2016′ ಸರಣಿ ಕಾರ್ಯಕ್ರಮ ಸಮಾಜಮಂದಿರದಲ್ಲಿ ಸಂಪನ್ನಗೊಂಡಿತು.
ಸಚಿವ ಶ್ರೀ ಕೆ. ಅಭಯಚಂದ್ರ ಜೈನ್ ತರಬೇತುದಾರರನ್ನು ಸನ್ಮಾನಿಸಿ ಎಸ್‍ಎಸ್‍ಎಲ್‍ಸಿಯಂತಹ ವಿದ್ಯಾರ್ಥಿಗಳ ಭವಿಷ್ಯವನ್ನು ಬದಲಿಸುವ ಈ ಮಹತ್ಚ ಪೂರ್ಣ ಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಸರಿಯಾದ ಹಾದಿಯನ್ನು ತೋರಿಸಿ, ಆ ನಿಟ್ಟಿನಲ್ಲಿ ಕಾರ್ಯ ಪ್ರವರ್ತರಾಗುತ್ತಿರುವುದು ಶ್ಲಾಘನೀಯ ಎಂದರು.
ಸೇವಾ ಕಾರ್ಯ: ಜಮೀಯ್ಯತ್ತುಲ್ ಫಲ್ಹಾಃ ಮೂಡುಬಿದರೆ ಘಟಕದ ವತಿಯಿಂದ ರೋಟರಿ ಕ್ಲಬ್ ಮೂಡುಬಿದಿರೆ, ಬಡವರಿಗಾಗಿ ºಮ್ಮಿಕೊಂಡಿರುವ ಶೌಚಾಲಯ ನಿರ್ಮಾಣ ಕಾರ್ಯಕ್ರಮಕ್ಕೆ ರೂ. 25,000 ಚೆಕ್‍ನ್ನು ಅಧ್ಯಕ್ಷರಾದ ಶೇಖ್ ಅಬ್ದುಲ್ ಗಫೊರ್‍ರವರು ರೋಟರಿ ಕ್ಲಬ್ ಅಧ್ಯಕ್ಷ ರೊಟೋರಿಯನ್ ಪಿ.ಕೆ.ಥೋಮಸ್‍ರವರಿಗೆ ಹಸ್ತಾಂತರಿಸಿದರು.
ಮೂಡುಬಿದರೆ ಜೈನ್ ಫ್ರೌಢ ಶಾಲೆಯ ಶಿಕ್ಷಕ ಮುನಿರಾಜ್ ರೆಂಜಾಳ ದಿಕ್ಸೂಚಿ ಭಾಷಣ ಮಾಡಿದರು.
10mood Geluvu
ಜಮೀಯ್ಯತ್ತುಲ್ ಫಲ್ಹಾಃ ಮೂಡುಬಿzದಿರೆಯ ಅಧ್ಯಕ್ಷ ಶೇಖ್ ಅಬ್ದುಲ್ ಗಫೂರ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಹಸದುಲ್ಲಾ ಇಸ್ಮಾಯಿಲ್ ಪ್ರಾಸ್ತಾವಿಕ ವಾಗಿ ಮಾತಾಡಿದರು.
ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷೆ ರಶ್ಮಿತಾ ಜೈನ್, ಕಾರ್ಯದರ್ಶಿ ಪ್ರಜ್ವಲ್, ಜಮೀಯ್ಯತ್ತುಲ್ ಫಲ್ಹಾಃ ದ.ಕ ಮತ್ತು ಉಡುಪಿ ಜಿಲ್ಲೆಯ ಅಧ್ಯಕ್ಷ ಅಬ್ದುಲ್ ಗಫೂರ್, ಕ್ಷೇತ್ರ ಶಿಕ್ಷಣಾಧಿಕಾರಿಗೋವಿಂದ ಮಡಿವಾಳ, ರೋಟರಿ ಕ್ಲಬ್ ಅಧ್ಯಕ್ಷರಾದ ಪಿ. ಕೆ. ಥೋಮಸ್, ಜಮೀಯ್ಯತ್ತುಲ್ ಫಲ್ಹಾಃ ಸ್ಥಾಪಕಾ ನಿರ್ದೇಶಕ ಅಬ್ದುಲ್ ರವೂಫ್ ಉಪಸ್ಥಿತರಿದ್ದರು. ಜಮೀಯ್ಯತ್ತುಲ್ ಫಲ್ಹಾಃ ಮೂಡುಬಿದಿರೆ ಘಟಕದ ಕಾರ್ಯದರ್ಶಿ ಸಲೀಮ್ ಹಂಡೇಲ್ ಸ್ವಾಗತಿಸಿದರು. ರಿಯಾಜ್ ಕಿರಾಅತ್ ಪಟಿಸಿದರು. ಎಂ. ಹೆಚ್ ಮೊಹಮ್ಮದ್ ಶರೀಫ್ ವಂದಿಸಿದರು.ನಯೀಮ್ ಕಾರ್ಯಕ್ರಮ ನಿರೂಪಿಸಿದರು.

ಮೂಡುಬಿದಿರೆ ವಲಯದಲ್ಲಿ ಸುಮಾರು 31 ಫೌಡ ಶಾಲೆ ಹಾಗೂ 2 ಪದವಿಪೂರ್ವ ಕಾಲೇಜುಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗ್ರಾಮಾಂತರ ಪ್ರದೇಶದಲ್ಲಿರುವ ಸರ್ಕಾರಿ ಅನುದಾನಿತ, ಅನುದಾನ ರಹಿತ ಫ್ರೌಢ ಶಾಲೆಗಳ ಜೊತೆಗೆ ನಗರ ಪ್ರದೇಶದಲ್ಲಿನ ಆಂಗ್ಲ ಮಾಧ್ಯಮ ಶಾಲೆಗಳಲ್ಲಿನ 1403 ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *