ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಅರಳ ಮತ್ತು ಕೊಯಿಲ ಗ್ರಾಮಗಳಿಗೆ ಸಂಬಂಧಪಟ್ಟ ಪೌರಾಣಿಕ ಹಿನ್ನೆಲೆ ಹೊಂದಿರುವ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಇದೇ 17ರಿಂದ 22ರತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.
17ರಂದು ಬೆಳಿಗ್ಗೆ ಗಂಟೆ 7.35ಕ್ಕೆ ಕುಂಟ ಮುಹೂರ್ತ ಮತ್ತು ಚಂಡಿಕಾಯಾಗ ನಡೆಯಲಿದೆ. ಅಂದು ಮಧ್ಯಾಹ್ನ ನವಕ ಪ್ರಧಾನ ಗಣಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ. ರಾತ್ರಿ ಗಂಟೆ 7ರಿಂದ ಭಜನಾ ಸೇವೆ ಮತ್ತು ಧೂಮಾವತಿ ದೈವದ ಭಂಡಾರ ಬಂದು ಧ್ವಜಾರೋಹಣ ಉತ್ಸವ ಆರಂಭ.
ರಾತ್ರಿ ಗಂಟೆ 8.30ರಿಂದ ಶ್ರೀ ಕ್ಷೇತ್ರ ಕಟೀಲು ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಮತ್ತು ರಾತ್ರಿ 9ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
18ರಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ರಾತ್ರಿ ದೀಪದ ಬಲಿ ಉತ್ಸವ, ಭಜನೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
19ರಂದು ಮಧ್ಯಾಹ್ನ ನಡುಬಲಿ ಉತ್ಸವ, ಚಂದ್ರ ಮಂಡಲೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಭಜನೆ, ಬಾಲನೃತ್ಯ ಕಲಾವಿದರಿಂದ ನೃತ್ಯ ವೈಭವ ಮತ್ತು ಸಾರ್ವಜನಿಕ ಅನ್ನಸಂತರ್ಪu, ರಾತ್ರಿ 10 ಗಂಟೆಗೆ ಬಲೇ ತೆಲಿಪಾಲೆ ತಂಡದಿಂದ ‘ಕುಸಲ್ದ ಕುರ್ಲರಿ’ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.
20ರಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಭೂತಬಲಿ, ಕವಾಟ ಬಂಧನ, ಮತ್ತು ಭಜನೆ ಸೇವೆ ನಡೆಯಲಿದೆ.
21ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಚಂಡಿಕಾಯಾಗ, 11ಗಂಟೆಗೆ ಸ್ಥಳೀಯ ಪುಟಾಣಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಚೂರ್ಣೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ, ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಭೀಷ್ಮ ವಿಜಯ’ ಯಕ್ಷಗಾನ ತಾಳಮದ್ದಳೆ.
ರಾತ್ರಿ ಭಜನೆ, ದೇವರ ಅವಭೃತ ಸ್ನಾನ, ಧ್ವಜಾವರೋಹಣ ಮತ್ತು ಧೂಮಾವತಿ ದೈವದ ನೇಮೋತ್ಸವ ಹಾಗೂ ಗೋಶಿನ್ ರಿವ್ಯೂ ತಂಡದಿಂದ ರಾತ್ರಿ 8ಗಂಟೆಗೆ ‘ಕರಾಟೆ ಪ್ರದರ್ಶನ’ಗೊಳ್ಳಲಿದೆ.
