ಬಂಟ್ವಾಳ : ಕಂದಾಯ ಇಲಾಖೆ ಉದ್ಯೋಗಿ ಬಂಟ್ವಾಳ ಕಾರ್ಯನಿರ್ವಾಹಕ ದಂಡಾಧಿಕಾರಿ ಪುರಂದರ ಹೆಗಡೆ ಇವರ ಕಾರ್ಯವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾರನಾಥ ಜಿ.ಎಸ್.ಬೋಳಾರ ಇವರು ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ಸರಕಾರಿ ನೌಕರರ ಕ್ರೀಡಾಕೂಟದ 62ಕೆ.ಜಿ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಶಿವಮೊಗ್ಗದಲ್ಲಿ ಜರಗಲಿರುವ ರಾಜ್ಯ ಮಟ್ಟದ ಸಿವಿಲ್ ಸರ್ವಿಸಸ್ ಕ್ರೀಡಾಕೂಟಕ್ಕೆ ದ.ಕ.ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಇವರು ಎಸ್.ಪಿ.ಸಿ.ಐ ನ ಸದಸ್ಯ ಹಾಗೂ ಮಂಗಳೂರು ವಿ.ವಿ.ಯ ಶಾರೀರಿಕ ಉಪನಿರ್ದೆಶಕ ಡಾ.ಎಚ್.ನಾಗಲಿಂಗಪ್ಪ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

