ಬಂಟ್ವಾಳ:  ದಫ್ ಕಲೆಯು ಮೇಲ್ನೋಟಕ್ಕೆ ಜನಪದೀಯ ನೃತ್ಯದಂತೆ ಕಂಡು ಬಂದರೂ ಇದರ ಒಳ ತಿರುಳು ಆಧ್ಯಾತ್ಮಿಕತೆಯಿಂದ ಕೂಡಿದೆ ಎಂದು ಮೈಸೂರು ಮಹಾಲಿಂಗೇಶ್ವರ ಮಠದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಪಾಣೆಮಂಗಳೂರು ಆಲಡ್ಕದಲ್ಲಿ ಅವಿಭಜಿತ ಜಿಲ್ಲಾ ದಫ್ ಎಸೋಸಿಯೇಶನ್ ಸಹಿತ ಬ್ಯಾರಿ ಸಾಹಿತ್ಯ ಪರಿಷತ್ ಮತ್ತು ಕರಾವಳಿ ಟೈಮ್ಸ್ ಪತ್ರಿಕಾ ಬಳಗ ವತಿಯಿಂದ ಶನಿವಾರ ರಾತ್ರಿ ಏರ್ಪಡಿಸಿದ್ದ ಹೊನಲು ಬೆಳಕಿನ ದಫ್ ಸ್ಪರ್ಧೆ ಮತ್ತು ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

3btl-Aladka

3btl-Daffಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಂದಾವರ ಕೇಂದ್ರ ಮಸೀದಿ ಖತೀಬ್ ಎನ್.ಎಚ್. ಆದಂ ಫೈಝಿ, ಸೂಫಿ ಮತ್ತು ಶರಣ ಸಂತರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಸ್ತಿ, ಆರೋಗ್ಯ ಸಚಿವ ಯು.ಟಿ. ಖಾದರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮುಹಮ್ಮದ್, ಎನ್.ಎಸ್. ಕರೀಂ, ಮಾಜಿ ಸದಸ್ಯ ಉಮರ್ ಫಾರೂಕ್, ಗೋಳ್ತಮಜಲು ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್. ಮುಸ್ತಫಾ, ಕೆಪಿಸಿಸಿ ಕಾರ್ಮಿಕ ವಿಭಾಗ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಹಿದಾಯತ್ ಫೌಂಡೇಶನ್ ಸಂಚಾಲಕ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು, ನಿವೃತ್ತ ಉಪ ತಹಶೀಲ್ದಾರ್ ರೋಹಿನಾಥ್, ಕಾರಾಜೆ ಜುಮಾ ಮಸೀದಿ ಅಧ್ಯಕ್ಷ ಕೆ. ಶೇಖಬ್ಬ, ಆಲಡ್ಕ ಎಂಜೆಎಂ ಅಧ್ಯಕ್ಷ ಬಿ. ಅಬೂಬಕ್ಕರ್ , ಕಾರ್ಯದರ್ಶಿ ಪಿ.ಎಂ. ಉಮ್ಮರಬ್ಬ ಮತ್ತಿತರರು ಶುಭ ಹಾರೈಸಿದರು.

ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದಿಕ್, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಹಮೀದ್ ಗೋಳ್ತಮಜಲು, ಝಕರಿಯ್ಯಾ ಕಲ್ಲಡ್ಕ, ದಫ್ ಎಸೋಸಿಯೇಶನ್ ಸದಸ್ಯರಾದ ಕೆ.ಎಂ.ಎ. ಕೊಡುಂಗಾಯಿ, ಜಸೀಂ ಸಜಿಪ, ಆಶಿಕ್ ಕುಕ್ಕಾಜೆ, ನೌಫಲ್ ಕುಡ್ತಮುಗೇರು, ಪ್ರಮುಖರಾದ ಹಾರಿಸ್ ಕಲ್ಲಡ್ಕ, ಝುಬೈರ್ ತಲೆಮೊಗರು, ರಶೀದ್ ವಿಟ್ಲ, ಮತ್ತಿತರರು ಇದ್ದರು.
ದಫ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಸ್ವಾಗತಿಸಿ, ಯು. ಮುಸ್ತಫಾ ಆಲಡ್ಕ ವಂದಿಸಿದರು. ಅಕಾಡೆಮಿ ಸದಸ್ಯ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಕವಿಗೋಷ್ಠಿ
ಹುಸೈನ್ ಕಾಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹು ಭಾಷಾ ಕವಿಗೋಷ್ಠಿಯಲ್ಲಿ ಇಬ್ರಾಹಿಂ ತಣ್ಣೀರುಬಾವಿ, ಚಂದ್ರಶೇಖರ್ ಪಾತೂರು, ರಹೀಂ ಬಿ.ಸಿ.ರೋಡು, ಶರೀಫ್ ನೀರ್ಮುಂಜೆ, ಎ. ಗೋಪಾಲ ಅಂಚನ್, ಅಶ್ರಫ್ ಕಲ್ಲಡ್ಕ, ಡಾ. ಪ್ರಶಾಂತ್ ಕಲ್ಲಡ್ಕ, ರಶೀದ್ ನಂದಾವರ, ಸತ್ತಾರ್ ಗೂಡಿನಬಳಿ, ಪೂವಪ್ಪ ನೇರಳಕಟ್ಟೆ, ಸಲೀಂ ಬೋಳಂಗಡಿ, ಎಂ.ಪಿ. ಬಶೀರ್ ಬಂಟ್ವಾಳ, ವಿಶ್ವನಾಥ ನೇರಳಕಟ್ಟೆ ಕವನ ವಾಚಿಸಿದರು.
ಪರ್ಲಡ್ಕ ತಂಡಕ್ಕೆ ದಫ್ ಪ್ರಶಸ್ತಿ
ದಫ್ ಸ್ಪರ್ಧೆಯಲ್ಲಿ ಪ್ರಥಮ ಬಾರಿಗೆ ಗರಿಷ್ಠ 36 ತಂಡಗಳು ಭಾಗವಹಿಸಿ ಪುತ್ತೂರು-ಪರ್ಲಡ್ಕದ ಹಯಾತುಲ್ ಇಸ್ಲಾಂ ದಫ್ ತಂಡ ಪ್ರಥಮ, ಮಂಗಳೂರು-ಆಕಾಶಭವನ ಸಿ.ಎಂ. ದಫ್ ತಂಡ ದ್ವಿತೀಯ, ಕಾಪು-ಫಕೀರ್ಣಕಟ್ಟೆ ಹಿಮಾಯತುಲ್ ಇಸ್ಲಾಂ ದಫ್ ತಂಡ ತೃತೀಯ ಸ್ಥಾನ ಗೆದ್ದುಕೊಂಡಿತು.

By suddi9

Leave a Reply

Your email address will not be published. Required fields are marked *