ಬಂಟ್ವಾಳ:  ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರವು ರೈತರ ಕುಮ್ಕಿ ಹಕ್ಕನ್ನು ಕಸಿಯಲು ಹೊರಟಿದ್ದು, ಇದರ ವಿರುದ್ಧ ಇದೇ 6ರಂದು ಪುತ್ತೂರಿನ ಒಕ್ಕಲಿಗ ಯಾನೆ ಗೌಡ ಸಂಘದ ಸಭಾ ಭವನದಲ್ಲಿ ನಡೆಯಲಿರುವ ‘ಕುಮ್ಕಿ ಹಕ್ಕಿಗಾಗಿ ಹೋರಾಟ’ ಮತ್ತು ರೈತರ ಜಾಗೃತಿ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರ ಮುಖಂಡರು ಭಾಗವಹಿಸುವರು. ಬಂಟ್ವಾಳ ಕ್ಷೇತ್ರದಿಂದಲೂ ಅಂದು ಸಾವಿರಕ್ಕೂ ಮಿಕ್ಕಿ ಮಂದಿ ರೈತರು ಭಾಗವಹಿಸಲಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ಕುಮ್ಕಿ ಹಕ್ಕು ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರೈತರಿಗೆ ವಂಚಿಸಿದೆ ಎಂದು ಅವರು ಆರೋಪಿಸಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ ಅವರು ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸದ ನಳಿನ್ ಕುಮಾರ್ ಅವರನ್ನು ಟೀಕಿಸುವ ಮೂಲಕ ರಾಜಕೀಯ ಅಪ್ರಬುದ್ಧತೆ ಪ್ರದರ್ಶಿಸಿದ್ದಾರೆ ಎಂದು ಕ್ಷೇತ್ರಾಧ್ಯಕ್ಷ ಜಿ. ಆನಂದ ಟೀಕಿಸಿದರು.

By suddi9

Leave a Reply

Your email address will not be published. Required fields are marked *