ಮೂಡುಬಿದಿರೆ: ಪಡುಮಾರ್ನಾಡು ಕಾಂಗ್ರೆಸ್ ಬೆಂಬಲಿತ ಮೂವರು ಪಂಚಾಯತಿ ಸದಸ್ಯರು ಬುಧವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಸೂರಜ್ ಬನ್ನಡ್ಕ, ಶೋಭಾ ವಸಂತ ಮತ್ತು ಶೋಭಾ ದಿನೇಶ್ ಬುಧವಾರ ಸಂಜೆ ಪಡುಮಾರ್ನಾಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಸೇರಿದರು. ಸೂರಜ್ ಸತತ ಎರಡನೇ ಬಾರಿ ಪಂಚಾಯಿತಿ ಸದಸ್ಯರಾಗಿ ಜಯಗಳಿಸಿದರೆ ಉಳಿದಿಬ್ಬರು ಮಹಿಳಾ ಸದಸ್ಯರು ಪ್ರಥಮ ಬಾರಿಗೆ ಪಂಚಾಯತ್‍ಗೆ ಆಯ್ಕೆಯಾಗಿದ್ದಾರೆ.
28 mood BJP (1)

28 mood BJP (2)ಕಾಂಗ್ರೆಸ್‍ನಿಂದ ಅವಗಣನೆ: ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದರು ಪಕ್ಷದ ಕಾರ್ಯಕ್ರಮಗಳಿಗೆ ನಮ್ಮನ್ನು ಆಮಂತ್ರಿಸದೆ ದೂರವಿಡುತ್ತಿದ್ದರು. ಅಗತ್ಯ ಬಂದಾಗ ಮಾತ್ರ ನಮ್ಮ ನೆನಪಾಗುತ್ತದೆ. ಈ ಕಾರಣಕ್ಕಾಗಿ ನನ್ನ ಸ್ನೇಹಿತರು, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಬಿಜೆಪಿ ಸೇರಿದ್ದೇನೆ ಎಂದು ಸೂರಜ್ ಪತ್ರಿಕೆಗೆ ಪ್ರತಿಕ್ರಿಯಿಸಿದರು.
ಬಿಜೆಪಿ ಪ್ರಮುಖರಾದ ಉಮಾನಾಥ ಕೋಟ್ಯಾನ್, ಜಗದೀಶ್ ಅಧಿಕಾರಿ, ಸುಚರಿತ ಶೆಟ್ಟಿ, ಸುದರ್ಶನ್ ಎಂ, ಪಡುಮಾರ್ನಾಡು ಗ್ರಾ.ಪಂ ಅಧ್ಯಕ್ಷ ಶ್ರೀನಾಥ್ ಸುವರ್ಣ, ಬೆಳುವಾಯಿ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ಆಚಾರ್ಯ, ಪಂ. ಸದಸ್ಯ ಸುಖೇಶ್ ಶೆಟ್ಟಿ, ಪುರಸಭಾ ಸದಸ್ಯ ನಾಗರಾಜ ಪೂಜಾರಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *