ಪೊಳಲಿ : ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಮಂಗಾಜೆ ಎಂಬಲ್ಲಿ ಪೊಳಲಿ ಕಡೆಯಿಂದ ಅತೀ ವೇಗದಿಂದ ಬರುತ್ತಿದ್ದ ಸ್ವಿಪ್ಟ್ ಕಾರೋಂದು ಮಂಗಾಜೆ ತಿರುವು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಬಸ್ಸು ನಿಲ್ದಾಣಕ್ಕೆ ಗುದ್ದಿ ನಿಂತಿದೆ ಈ ಭಾಗದ ಎದುರು ಭಾಗದಲ್ಲಿ ಹಲವು ಮನೆಗಳು ಹಾಗೂ ಮೆಸ್ಕಾಂ ತಂತಿಕಂಬಗಳಿದ್ದು ದೊಡ್ಡ ಅಪಾಯ ಸಂಭವಿಸುತ್ತಿತ್ತು ಸ್ವಿಪ್ಟ್ ಕಾರಿನಲ್ಲಿದ್ದವರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಮಂಗಾಜೆ ಕೊರ್ದಬ್ಬು ದೈವಸ್ಥಾನವಿದ್ದು ಇಲ್ಲಿಯ ರಾಹು ಗುಳಿಗ ದೈವದ ಕಾರ್ಣಿಕವಿದ್ದು ಇಲ್ಲಿಯ ಸ್ಥಳೀಯರು ಸಂಶಯವ್ಯಕ್ತ ಪಡಿಸುತ್ತಿದ್ದರು ಇದೊಂದು ಅಪಾಯಕಾರಿ ತಿರುವು ರಸ್ತೆಯಾಗಿದ್ದು ಇತ್ತಿಚೇಗೆ ಹಲಾವಾರು ಅಫಘಾತಗಳು ಸಂಭವಿಸಿ ಪ್ರಾಣ ಕಳೆದು ಕೊಂಡಿದ್ದಾರೆ.
ಮಂಗಾಜೆಯಲ್ಲಿ ನಡೆಯುತ್ತಿರುವ ಅಪಘಾತಕ್ಕೆ ಯಾರು ಕಾರಣ?
ಈ ರಸ್ತೆಯಲ್ಲಿ ಅಪಘಾತ ನಡೆಯುತ್ತದೆ ಎಂದಾಗ ಎಲ್ಲರೂ ಅಚ್ಚರಿ ಪಡುತ್ತಾರೆ. ಯಾಕೆಂದರೆ ಇದು ಅಪಘಾತ ನಡೆಯುವ ರಸ್ತೆಯಂತಿಲ್ಲ. ಅಲ್ಲದೆ ಈ ರಸ್ತೆಯಲ್ಲಿ ಅಷ್ಟೇನೂ ತಿರುವೂ ಸಹ ಇಲ್ಲ. ಹೇಳಿಕೇಳಿ ಈ ರಸ್ತೆ ಉತ್ತಮವಾಗಿಯೇ ಇದೆ. ಆದರೂ ಇಲ್ಲಿ ಅಡಿಗಡಿಗೆ ಅಪಘಾತಗಳು ಸಂಭವಿಸುತ್ತಲೇ ಇದೆ ಹಲಾವಾರು ಪ್ರಾಣ ಕಳೆದುಕೊಂಡಿದ್ದಾರೆ.
ಹೌದು ಇದು ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಮಂಗಾಜೆ ರಸ್ತೆಯ ಕಥೆ-ವ್ಯಥೆ. ಇಲ್ಲಿ ಅಪಘಾತ ನಡೆಯಲು ಕಾರಣವೂ ಇದೆ ಎಂದು ಆಸ್ತಿಕ ಬಾಂಧವರು ನಂಬುತ್ತಾರೆ.
ರಾಹುಗುಳಿಗನ ಅಸಾಮಾಧಾನವೇ?
ಇಲ್ಲಿ ನಡೆಯುತ್ತಿರುವ ಹಲವಾರು ಅಪಘಾತಗಳಿಗೆ ರಾಹುಗುಳಿಗನ ಅಸಮಾಧಾನವೇ ಕಾರಣವೆಂದು ನಂಬಲಾಗುತ್ತದೆ. ಯಾಕೆಂದರೆ ಇಲ್ಲಿ ಒಂದು ಕೋರ್ದಬ್ಬು ದೈವಸ್ಥಾನವಿದ್ದು ಇನ್ನೂ ಪೂರ್ತಿಯಾಗಿ ಜೀರ್ಣೋದ್ಧಾರಗೊಂಡಿಲ್ಲ. ವರ್ಷಕ್ಕೊಂದು ಬಾರಿ ನೇಮೋತ್ಸವ ನಡೆಯುವ ಹೊರತಾಗಿ ಬೇರೇನೂ ಈ ದೈವಸ್ಥಾನದ ಅಭಿವೃದ್ಧಿ ಕನಸಾಗಿಯೇ ಉಳಿದಿದೆ.
ಈ ದೈವಸ್ಥಾನದ ಜಾಗವು ಖಾಸಗಿಯವರ ಕೈಯಲ್ಲಿದ್ದು ಅಭಿವೃದ್ದಿಗೊಳಿಸಲು ಹಲವು ಒಡಕು ತೊಡಕುಗಳಿದ್ದು . ಈ ದೈವಸ್ಥಾನದಲ್ಲಿ ಕೋರ್ದಬ್ಬು ಸೇವಾ ಸಮಿತಿಯು ಇದ್ದು ಊರವರ ಸಹಕಾರದಿಂದ ವರ್ಷಂಪ್ರತಿ ನೇಮೋತ್ಸವ ನಡೆಸಲಾಗುತಿದೆ. ಆದರೆ ಖಾಸಗಿ ವ್ಯಕ್ತಿಗಳ ದೈವಸ್ಥಾನದ ಜಾಗ ಇದಾಗಿದ್ದು ಸ್ಥಳಾವಕಾಶವನ್ನು ದೈವಸ್ಥಾನ ಜೀರ್ಣೋದ್ಧಾರ ಕೈಗೊಳ್ಳಲು ಕೋರ್ದಬ್ಬು ಸೇವಾಸಮಿತಿಗೆ ಕಷ್ಟವಾಗುತ್ತಿದೆ.
ಇಲ್ಲಿ ಒಂದು ಕೊಂಚ ತಿರುವು ಇರುವ ರಸ್ತೆ ಇದೆ. ಹಾಗೆ ನೋಡಿದರೆ ಇಲ್ಲಿ ಅಪಘಾತ ನಡೆಯುವ ಲಕ್ಷಣಗಳೇ ಕಾಣುತ್ತಿಲ್ಲ. ರಸ್ತೆಯೂ ಸಾಕಷ್ಟು ಅಗಲವಾಗಿದೆ. ಆದರೂ ದೈವಸ್ಥಾನದ ಸಮೀಪ ಬರುತ್ತಿದ್ದಂತೆ ವಾಹನಗಳು ಅಚಾತುರ್ಯ ನಡೆದಂತೆ ಅಪಘಾತಕ್ಕೀಡಾಗುತ್ತದೆ. ಇದರಿಂದಾಗಿ ಊರವರು ಇಲ್ಲಿ ವಾಹನದಲ್ಲಿ ಸಂಚರಿಸಲು ಭಯಪಡುತ್ತಾರೆ.
ಇಲ್ಲಿ ರಿಕ್ಷಾ ಮತ್ತು ಬಸ್ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ದುರ್ಮರಣಕ್ಕೀಡಾಗಿದ್ದು ಜನರನ್ನು ಮತ್ತಷ್ಟು ಭಯಪಡಿಸಿದೆ. ಅಲ್ಲದೆ ಇಲ್ಲಿ ಕೆಲವೊಂದು ಅಸಹಜ ವರ್ತನೆಗಳು ಕಂಡುಬರುತ್ತಿದೆ ಎಂಬುದು ಊರವರ ಅಭಿಪ್ರಾಯ. ರಾತ್ರ್ರಿಹೊತ್ತು ಇಲ್ಲಿ ಕಿರುಚಾಟವೂ ಕೇಳಿಬರುತ್ತದೆ ಎಂದು ಕೆಲವರು ಪತ್ರಿಕೆಗೆ ಹೇಳಿಕೊಂಡಿದ್ದಾರೆ. ರಾಹುಗುಳಿಗೆ ಬಹಳ ಕಾರಣಿಕದ ದೈವವಾಗಿದ್ದು ಊರವರ ವರ್ತನೆಗೆ ಮುನಿದುಕೊಂಡು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಇಲ್ಲಿನ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದೆಲ್ಲಾ ಪರಿಹಾರವಾಗಬೇಕಾದರೆ ರಾಹುಗುಳಿಗನ ಮನಸ್ಸನ್ನು ಸಮಧಾನ ಪಡಿಸಬೇಕಾಗಿದೆ. ಸೂಕ್ತ ವಿಧಾನದಲ್ಲಿ ಇಲ್ಲೊಂದು ದೈವಸ್ಥಾನ ನಿರ್ಮಾಣವಾಗಬೇಕಿದೆ.
ಊರಿನ ಗಣ್ಯರು ಸೇರಿಕೊಂಡು, ಖಾಸಗಿಯವರು ಇಲ್ಲಿ ನಡೆಯುವ ಅವಘಡವನ್ನು ಮನಗಂಡು ದೈವಸ್ಥಾನಕ್ಕೆ ಜಾಗವನ್ನು ಬಿಟ್ಟುಕೊಟ್ಟು ದೈವಸ್ಥಾನ ಜೀರ್ಣೋದ್ಧಾರಗೊಳಿಬೇಕು ಎಂಬುದು ಜನರು ಅಭಿಪ್ರಾಯ ಪಡುತ್ತಾರೆ.
ಅಲ್ಲದೆ ಇಲ್ಲಿ ವರ್ಷಂಪ್ರತಿ ನೇಮೋತ್ಸವ, ಸಂಕ್ರಮಣ ಕಳೆಯುವಿಕೆ, ಕೋಳಿಬಲಿ ನಡೆದರೆ ಇಲ್ಲಿ ನಡೆಯುವ ಅಪಘಾತಕ್ಕೆ ಬ್ರೇಕ್ ಬೀಳಬಹುದು ಎಂಬುದು ಇಲ್ಲಿನ ಆಸ್ತಿಕ ಜನರ ಅಭಿಪ್ರಾಯವಾಗಿದೆ.
ಒಟ್ಟಿನಲ್ಲಿ ಇಲ್ಲಿನ ಜನರ ನಂಬಿಕೆಯೋ ಅಚಾತುರ್ಯವೋ ಗೊತ್ತಾಗದೆ ಇಲ್ಲಿ ಅನೇಕ ಬಾರಿ ಅಪಘಾತಗಳು ಸಂಭವಿಸುತ್ತಿದೆ. ಒಂದಾದರೂ ಅಪಘಾತ ನಡೆಯದ ವಾರಗಳೇ ಇಲ್ಲ. ಇದೆಲ್ಲಾ ಇಲ್ಲಿನ ಊರವರನ್ನು ಚಿಂತೆಗೀಡಾಗುವಂತೆ ಮಾಡಿದೆ.
ಸೇವಾಸಮಿತಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರ ಅಭಿಪ್ರಾಯ
ಸುಮಾರು ವರ್ಷಗಳ ಮುಂಚೆ ಇಲ್ಲಿ ಅಫಘಾತಗಳು ನಡೆಯುತ್ತಿರಲಿಲ್ಲ. ಯಾವಾಗ ದೈವಸ್ಥಾನದ ಜೀರ್ಣೋದ್ದಾರವಾಗದೇ ಇರುವುದೋ ಅಲ್ಲಿಯವರೆಗೆ ದೈವ ಮುನಿದುಕೊಂಡು ಇಲ್ಲಿ ಅಪಘಾತ ನನಡೆಯಲು ಕಾರಣವಾಗಿರುತ್ತದೆ.
ನಾನು ಸುಮಾರು 20 ವರ್ಷಗಳಿಂದ ಕೋರ್ದಬ್ಬು ಸೇವಾಸಮಿತಿಯ ಕಾರ್ಯದರ್ಶಿಯಾಗಿದ್ದೆ. ಇಲ್ಲಿ ದೈವಸ್ಥಾನ ಜೀರ್ಣೋದ್ಧಾರ ವಾಗಬೇಕಾಗಿದೆ ಜಾಗದ ಕೊರತೆಯು ಒಂದು ಕಾರಣ ಇಲ್ಲಿನ ದೈವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲು ಎಲ್ಲರು ಸಹಕರಿಸಿದಾಗ ಮಾತ್ರ ನಮ್ಮ ಸಮಿತಿಯು ದೈವಸ್ಥಾನವನ್ನು ಜೀರ್ಣೋದ್ದಾರಕ್ಕೆ ಪ್ರಯತ್ನಿಸಲಾಗುವುದು. ಕಾರ್ಯದರ್ಶಿ ಶೇಖರ್ ಬಂಗೇರಾ





