ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಹ್ಯಾಂಡ್ ಬಾಲ್ ಟೂರ್ನಮೆಂಟ್ ಇದೇ 27ರಂದು ಬೆಳಿಗ್ಗೆ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ ಶೆಟ್ಟಿ, ಉದ್ಯಮಿ ತಿಮ್ಮಪ್ಪ ನಾಯ್ಕ ನಾರ್ಯನಡಿಗುತ್ತು, ಜಯಪ್ರಕಾಶ ಶೆಟ್ಟಿ ಬುಲೇರಿ, ಅಮ್ಮು ರೈ ಹರ್ಕಾಡಿ, ವರದರಾಜ ಪೈ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
