ಭಯ,ಭಕ್ತಿ ಇರುವ ಜೀವನದಲ್ಲಿ ಶಾಂತಿ ಸಮಾಧಾನ: ಬಿಷಪ್
ಮಂಗಳೂರು: ಭಯ,ಭಕ್ತಿ ಇರುವ ಜೀವನದಲ್ಲಿ ಶಾಂತಿ ಸಮಾಧಾನಗಳಿರುತ್ತದೆ. ಇಡೀ ಜಗತ್ತಿನಲ್ಲಿ ಇವೆರಡನ್ನು ರೂಢಿಸಿಕೊಂಡವರು ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ. ಶಾಂತಿ ಸಮಾಧಾನದ ಬದುಕು ತಮ್ಮದಾಗಬೇಕಾದರೆ ಜೀವನದಲ್ಲಿ ಉದಾತ್ತ ಮೌಲ್ಯಗಳನ್ನು ರೂಢಿಸುವುದು ಅಗತ್ಯ. ನಿಸ್ವಾರ್ಥ ಭಕ್ತಿಭಾವ ತಮ್ಮಲಿರಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಆಲೋಶಿಯಷ್ ಪೌಲ್ ಹೇಳಿದರು.
DSC_4588

DSC_4589

DSC_4599

DSC_4607

DSC_4616

DSC_4622

DSC_4635

DSC_4637

DSC_4638

DSC_4642

DSC_4643

DSC_4651

DSC_4655

DSC_4661

DSC_4667

DSC_4668

DSC_4670

DSC_4680

DSC_4690

DSC_4696

DSC_4708

DSC_4714

DSC_4716

DSC_4720

DSC_4739

DSC_4746

DSC_4753

DSC_4758

DSC_4762

DSC_4767

DSC_4776

DSC_4790

DSC_4796

DSC_4799

DSC_4803

DSC_4805ವಾಮಂಜೂರಿನಲ್ಲಿರುವ ಸೈಂಟ್ ರೇಮಂಡ್ ವಿದ್ಯಾಸಂಸ್ಥೆಗಳಿಗೆ ಇಂದು ಭೇಟಿಯಿತ್ತ ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ವಿದ್ಯಾರ್ಥಿಗಳೊಂದಿಗೆ ಬೆರೆತು ಸಂವಾದ ನಡೆಸಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇಂದಿನ ಜಗತ್ತು ತೀವ್ರತರದ ಸ್ಪರ್ಧೆಯಿಂದ ಕೂಡಿದ್ದು ಇತರರೊಂದಿಗೆ ಸ್ರ್ಪಸಬೇಕಾದರೆ ಈಗಾಗಲೇ ತಯಾರಿ ನಡೆಸುವುದು ಅಗತ್ಯ.ಅದಕ್ಕಾಗಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕು. ಕಲಿಯುವುವುದು ಬರೀ ಜ್ಞಾನದ ಸಂಪತ್ತಲ್ಲ. ಅದರೊಂದಿಗೆ ಇತರೆ ವಿಷಯಗಳು ಬಹುಮುಖ್ಯ.ರಾಷ್ಟ್ರದಲ್ಲಿ ಹೆಸರುವಾಸಿಯಾದವರೆಲ್ಲ ಸೂಕ್ತ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬಂದವರೆಂದರು.ದೇವರು ನಮಗೆಲ್ಲ ವಿಶಿಷ್ಟ ಪ್ರತಿಭೆ ದಯಪಾಲಿಸಿದ್ದಾನೆ.ಬರೀ ಕೈಯಲ್ಲಿ ನಾವು ಭೂಮಿಗೆ ಬಂದಿಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿದ್ದು ಅದನ್ನು ಉಪಯೋಗಮಾಡಬೇಕು.ಆ ಮೂಲಕ ಜೀವನ ಅರಳಿಸಿಕೊಳ್ಳಬೇಕು ಎಂದರು.
ಸನ್ಮಾನ: ಸೈಂಟ್ ರೇಮಂಡ್ ವಿದ್ಯಾಸಂಸ್ಥೆಯಲ್ಲಿ ಸಾಧನೆ ಮಾಡಿದ ಕನ್ನಡ ಉಪನ್ಯಾಸಕ ರಾಮರಾಯ ಶ್ಯಾನುಭೋಗ್,ಹೈಸ್ಕೂಲ್‍ನ ಅಂಗ್ಲಮಾಧ್ಯಮ ಶಿಕ್ಷಕ ರಿಚರ್ಡ್ ಅಲ್ವಾರೀಸ್,ರೊನಾಲ್ಡ್ ಕೆ.ಎಸ್ ಲೋಬೊ, ಶಿಕ್ಷಕಿ ನಯನಾ, ಪದವಿಪೂರ್ವ ಉಪನ್ಯಾಸಕಿ ನಳಿನಾಕ್ಷಿ , ಬೆಥನಿ ವಿದ್ಯಾಸಂಸ್ಥೆಯ ಕ್ರಿಸ್ಟೆಲ್ಲಾ , ವಿದ್ಯಾರ್ಥಿಗಳಾದ ಯೋಗ ಸಾಧಕಿ ರಕ್ಷಿತಾ, ಭುವನ್‍ರಾಜ್, ರೋಹನ್, ಭವ್ಯಾ,ವಿಶಾಲ್‍ಯನ್ನು ಈ ಸಂದರ್ಭದಲ್ಲಿ ಧರ್ಮಗುರುಗಳು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಸೈಂಟ್ ರೇಮಂಡ್‍ಕಾಲೇಜಿನ ಪ್ರಿನ್ಸಿಪಾಲ್ ಡಾ.ಸೆಲಿನಾವಾಸ್, ಕಾಲೇಜಿನ ಕರೆಸ್ಪಾಂಡೆಂಟ್ ಮರೀಲಿಟಾ, ರೋಸಾಲಿಟಾ, ಸಗಾಯಸೆಲ್ವಿ ಉಪಸ್ಥಿತರಿದ್ದರು.ಸಂಸ್ಥೆಯ ವರಿಷ್ಠಾಕಾರಿ ಸಿಸ್ಟರ್ ಮರೀಯೆಟ್ ಸ್ವಾಗತಿಸಿದರು.ಭಗಿನಿ ಸಾಧನಾ ವರದಿ ವಾಚಿಸಿದರು.

By suddi9

Leave a Reply

Your email address will not be published. Required fields are marked *