ಮಂಗಳೂರು: ಸಿಟಾಡೆಲ್ ಡೆವಲಪರ್ಸ್ ಮಂಗಳೂರು ಇದರ ನೂತನ ಕಟ್ಟಡ ವುಡ್‍ವಿಲ್ಲಾ ಅಪಾರ್ಟ್‍ಮೆಂಟ್‍ನ ಉದ್ಘಾಟನಾ ಸಮಾರಂಭವು ಇಂದಿಲ್ಲಿ ಬುಧವಾರ ಮಂಗಳೂರು ಬೋಂದೆಲ್ ಏರ್ಪೋರ್ಟ್ ರೋಡ್ ಅಲ್ಲಿನ ರೂಪ್‍ಟೊಪ್ ವುಡ್‍ವಿಲ್ಲಾದಲ್ಲಿ ನೇರವೇರಿತು. ಶಿವಸಾಗರ್ ಗ್ರೂಫ್ ಆಫ್ ಹೊಟೇಲ್ಸ್ ಮುಂಬಯಿ ಇದರ ನಿರ್ದೇಶಕ ಹಾಗೂ ಸಿಟಾಡೆಲ್‍ನ ಎನ್.ಟಿ.ಪೂಜಾರಿ ಮತ್ತು ಯಶೋದಾ ಎನ್.ಟಿ.ಪೂಜಾರಿ ದಂಪತಿ ರಿಬ್ಬನ್ ಬಿಡಿಸಿ ರೂಪ್‍ಟೊಪ್ ವುಡ್‍ವಿಲ್ಲಾ ಉದ್ಘಾಟಿಸಿದರು. ಕಾರ್ಕಳ ಹೊಸಮಾರು ಬಲ್ಲೊಟ್ಟು ಶ್ರೀ ಕ್ಷೇತ್ರದ ವಿಖ್ಯಾತನಂದ ಸ್ವಾಮೀಜಿ ದೀಪ ಪ್ರಜ್ವಲಿಸಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಹರಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಬಿಲ್ಲವ ಜಾಗೃತಿ ಬಳಗ ಮುಂಬಯಿ ಇದರ ಗೌರವಾಧ್ಯಕ್ಷ ಮತ್ತು ಶಿವಸಾಗರ್ ಗ್ರೂಫ್ ಆಫ್ ಹೊಟೇಲ್ಸ್ ಸಮೂಹದ ಕಾರ್ಯಾಧ್ಯಕ್ಷ ಸುರೇಶ್ ಎಸ್.ಪೂಜಾರಿ ಪಡುಕೋಣೆ ಗೌರವ ಅತಿಥಿಗಳಾಗಿ ಮಹಾನಗರದಲ್ಲಿನ ಹೆಸರಾಂತ ಚಾರ್ಟರ್ಡ್ ಅಕಾಂಟೆಂಟ್ ಸಿಎ| ಪ್ರವೀಣ್ ಬಿ.ಶೆಟ್ಟಿ, ಎಂಸಿಸಿ ಪಚ್ಚನಾಡಿ ನಗರ ಸೇವಕಿ ಕವಿತಾ ಸನೀಲ್, ನಗರ ಸೇವಕ ಕೆ.ಹರಿನಾಥ್ ಸೇರಿದಂತೆ ಸಿಟಾಡೆಲ್ ಡೆವಲಪರ್ಸ್‍ನ ಪಾಲುದಾರರಾದ ಸಂದೀಪ್ ಕೆ., ಅಜಿತ್ ಕುಮಾರ್, ರಾಮು ಕುಮಾರ್ ಬೇಕಲ್ ಮತ್ತು ಅಪರ್ಣ ರಾಮು ಕುಮಾರ್, ಎನ್.ಟಿ.ಪೂಜಾರಿ ಮತ್ತು ಯಶೋದಾ ಎನ್.ಪೂಜಾರಿ(ದಂಪತಿಗಳು) ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಬೈಂದೂರು ಶಾಸಕ ಗೋಪಾಲ ಪೂಜಾರಿ, ಗುರುತು ಮಾಸಿಕದ ಸಂಪಾದಕ ಬಾಬು ಶಿವ ಪೂಜಾರಿ, ಸಂತೋಷಿ ಎಸ್.ಪೂಜಾರಿ, ಶಾರದಾ ಸೂರು ಕರ್ಕೇರ, ಮಹೇಂದ್ರ ಸೂರು ಪೂಜಾರಿ, ಮರಾಠ ಸುರೇಶ್ ಶೆಟ್ಟಿ, ಚಿತ್ರಾಪು ಕೆ.ಎಂ ಕೋಟ್ಯಾನ್, ಕು| ನಿಖಿತಾ ಎನ್.ಟಿ.ಪೂಜಾರಿ, ಕು| ಅಂಕಿತಾ ಎನ್.ಟಿ.ಪೂಜಾರಿ, ಗಂಗಾಧರ ಅಮೀನ್ ಮತ್ತಿತರ ನೂರಾರು ಗಣ್ಯರು ಉಪಸ್ಥಿತರಿದ್ದರು. ಶ್ರೀ ಸತ್ಯಮೂರ್ತಿ ಭಟವರು ತಮ್ಮ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು. ಸಂದೀಪ್ ಕೆ. ಮತ್ತು ಸೌಮ್ಯ ಸಂದೀಪ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಸೌಮ್ಯ ಸಂದೀಪ್ ಪ್ರಾರ್ಥನೆಯನ್ನಾಡಿದರು. ಅಪರ್ಣ ರಾಮು ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







