ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೇಳಿ ಬಂದ ಆರೋಪ ರಾಜಕೀಯ ದುರುದ್ದೇಶದಿಂದ ಮಾಡಿದ ಆರೋಪವಾಗಿದೆ ಎಂದು ಜಿಲ್ಲಾ ಬಿಜೆಪಿ ಹೇಳೀದೆ.
ರಾಜಕೀಯ ಸ್ವಾರ್ಥ ಸಾಧಿಸಲು ವಿಫಲರಾದ ಸ್ಥಾಪಿತ ಶಕ್ತಿಗಳು ಇಂತಹ ಪ್ರಯತ್ನ ನಡೆಸಿದ್ದು ಚುನಾವಣೆ ಪೂರ್ವದಲ್ಲಿಯೇ ಇಂತಹ ಚಿತಾವಣೆ ಪ್ರಾರಂಭವಾಗಿತ್ತು. ಆಧಾರ ರಹಿತವಾಗಿ ವ್ಯಕ್ತಿಯ ಚಾರಿತ್ರ್ಯ ಹನನ ಮಾಡುವ ಬ್ಲಾಕ್ ಮೇಲ್ ತಂತ್ರಗಳನ್ನು ಪ್ರಬುದ್ಧ ಜನ ಅರಿತಿದ್ದಾರೆ. ಇಂತಹ ಕೃತ್ಯಗಳನ್ನು ಪಕ್ಷ ಸಂಘಟಿತವಾಗಿ ಖಂಡಿಸಿ ವಿರೋಧಿಸುತ್ತದೆ. ಸಂಸದರ ಮಾನಹಾನಿ ಯತ್ನ ನಡೆಯುತ್ತಿದೆ ಎಂದು ಅವರು ಈ ಮೊದಲೇ ಪೊಲೀಸ್ ದೂರು ನೀಡಿದ್ದು ಇದರಿಂದ ಭೀತರಾದ ವ್ಯಕ್ತಿಗಳು ಒತ್ತಡ ತಂತ್ರವಾಗಿ ಸಂಸದರ ಮೇಲೆ ಪ್ರಕರಣ ದಾಖಲಿಸುವ ಕಾರ್ಯ ಮಾಡಿದ್ದಾರೆ. ಇದರ ವಿರುದ್ಧ ಕಾನೂನಿನ ಮೂಲಕವೇ ಸ್ಪಷ್ಟ ಹೋರಾಟ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ ಸಿಂಹ ನಾಯಕ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *