ಮೂಡುಬಿದಿರೆ: ಭೂಗತ ಪಾತಕಿ ರಶೀದ್ ಮಲಬಾರಿ ಸಹಚರರು ಎನ್ನಲಾದ ಇಬ್ಬರನ್ನು ಮಂಗಳವಾರ ಮೂಡುಬಿದಿರೆಯ ಪಾಲಡ್ಕ-ಕಡಂದಲೆ ಪೂಪಾಡಿಕಲ್ಲುವಿನಲ್ಲಿ ಅಚಾನಕ್ಬಂ ಆಗಿ ಬಂಧಿಸಲಾಗಿದೆ.ಬಂಧಿತ ವ್ಯಕ್ತಿಗಳು ಪೂಪಾಡಿಕಲ್ಲು ನಿವಾಸಿ ಫೈಜಲ್ ಮತ್ತು ಮಂಗಳೂರು ಬಜಾಲ್ ನಿವಾಸಿ ಟೆಲ್ಲತ್ ಎಂದು ಗುರುತಿಸಲಾಗಿದೆ.
ಕಡಂದಲೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ತನಿಖೆಗೆಂದು ಹೋದಾಗ ಾರೋಪಿಗಳಿಬ್ಬರ ಸೆರೆಯಾಗಿದೆ. ಇವರ ಮೇಲೆ ಹಲವು ಕೊಲೆ, ಕೊಲೆಯತ್ನ ಪ್ರಕರಣ ಕೋರ್ಟ್‌ನಲ್ಲಿದ್ದು, ಬಂಧನಕ್ಕೆ ಈ ಮೊದಲೇ ವಾರಂಟ್ ನೀಡಲಾಗಿತ್ತು. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆದರೆ ಬುಧವಾರ ಪೂಪಾಡಿಕಲ್ಲುವಿನಲ್ಲಿ ಕಳವು ಪ್ರಕರಣವೊಂದರ ತನಿಖೆ ನಡೆಸುತ್ತಿದ್ದಾಗ, ಈ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದರು. ಟೆಲ್ಲತ್ ಕಳೆದ ಕೆಲವು ಸಮಯದಿಂದ ಫೈಜಲ್ ನಿವಾಸದಲ್ಲಿ ತಲೆಮರೆಸಿಕೊಂಡಿದ್ದ. ಘಟನೆ ವಿವರ: ಪೂಪಾಡಿಕಲ್ಲುವಿನ ಮನೆಯೊಂದರಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುಮಾರು 10ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸಂಶಯದ ಮೇರೆಗೆ ಇಲ್ಲಿನ ನಿವಾಸಿ ಮಹಮ್ಮದ್ ಇಬ್ರಾಹಿಂ ಎಂಬವರ ಮನೆಗೆ ದಾಳಿ ಮಾಡಲಾಗಿತ್ತು.
ಈ ಸಂದರ್ಭ ಮನೆಯಲಿದ್ದ ಇಬ್ರಾಹಿಂ ಪುತ್ರ ಫೈಜಲ್ ಮತ್ತು ಮಂಗಳೂರು ಬಜಾಲ್ ನಿವಾಸಿ ಟೆಲ್ಲತ್ ಅವರನ್ನು ವಿಚಾರಿಸಿದಾಗ ರಶೀದ್ ಮಲಬಾರಿ ಜತೆಗಿನ ಇವರ ನಂಟು ಬಯಲಿಗೆ ಬಂತು. ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಮಂಗಳೂರಿಗೆ ಕರೆದೊಯ್ಯಲಾಗಿದ್ದು, ಎಸ್‌ಐ ರಮೇಶ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

