ಮುಂಬಯಿ, ಜ.06: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ತನ್ನ 87ನೇ ಶಾಖೆಯನ್ನು ಇಂದಿಲ್ಲಿ ಬುಧವಾರ ಬೆಳಿಗ್ಗೆ ಬೈಕಲಾ ಅಲ್ಲಿನ ಘೊಡಪ್‍ದೇವ್ ಪ್ರದೇಶದ ರಾಮ್‍ಬಾವು ಭೊಗ್ಳೆ ಮಾರ್ಗದಲ್ಲಿನ ಜೈಕೃಪಾ ಕೋ.ಹೌಸಿಂಗ್ ಸೊಸೈಟಿ ಕಟ್ಟಡದಲ್ಲಿ ಸೇವಾರಂಭಿಸಿದ್ದು, ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣರು ರಿಬ್ಬನ್ ಬಿಡಿಸಿ ನೂತನ ಶಾಖೆಯನ್ನು ಶುಭಾರಂಭ ಗೊಳಿಸಿದರು.
ಮುಖ್ಯ ಅತಿಥಿüಯಾಗಿ ಮೋಗವೀರ ಕೋ.ಅಪರೇಟಿವ್ ಬ್ಯಾಂಕ್‍ನ ಉಪಾಧ್ಯಕ್ಷ ಸುರೇಶ್ ಆರ್.ಕಾಂಚನ್ ಮತ್ತು ಕಟ್ಟಡದ ಮಾಲೀಕ ನಾರಾಯಣ ಶೆಟ್ಟಿ ಉಪಸ್ಥಿತರಿದ್ದು, ದೀಪ ಪ್ರಜ್ವಲಿಸಿ ಸಾಂಕೇತಿಕವಾಗಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿದರು. ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ, ಬ್ಯಾಂಕ್‍ನ ಹಿರಿಯ ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಲಾಕರ್ ಸೇವೆಗಳಿಗೆ ಚಾಲನೆಯನ್ನೀಡಿ ಶಾಖೆಯ ಸರ್ವೋನ್ನತಿಗೆ ಶುಭಕೋರಿದರು.
ನಾನು ಬಿಲ್ಲವ ಸಮಾಜಕ್ಕೆ ಸದಾ ಬದ್ಧನಾಗಿದ್ದು ಅದರಲ್ಲೂ ಜೀವಮಾನವಿಡೀ ಭಾರತ್ ಬ್ಯಾಂಕ್‍ಗೆ ಅಭಾರಿಯಾಗಿದ್ದೇನೆ. ಬಿಲ್ಲವ ಧುರೀಣ ಜಯ ಸುವರ್ಣರು ಸರ್ವ ಸಮಾಜಕ್ಕೆ ನಾಯಕರು. ಅವರ ಮುಂದಾಳುತ್ವದ ಸಾಧನೆ ಅತ್ಯದ್ಭುತವಾದದ್ದು. ಪ್ರತೀ ಮಾನವ ಜಾತಿಗೆ ಪ್ರೇರಣೆಯಾಗಿರುವ ಸುವರ್ಣರು ಬಡವರ ಪಾಲಿನ ಅನ್ನದಾತರಾಗಿದ್ದಾರೆ. ವಿಶೇಷವಾಗಿ ಮಹಾನಗರದಲ್ಲಿನ ರಿಕ್ಷಾ, ಟ್ಯಾಕ್ಸಿ, ಬೀಡದಂಗಡಿ, ಇನ್ನಿತರ ಕೆಳಮಟ್ಟದ ಜನತೆಗೆ ಪೆÇ್ರೀತ್ಸಹಕರಾಗಿ ಹಣಕಾಸು ಬೆಂಬಲವಿತ್ತ ಜಯಶೇಠ್ ಸರ್ವರ ಯಜಮಾನರೇ ಸರಿ. ಬ್ಯಾಂಕ್‍ನೊಂದಿಗೆ ಜನತೆಯನ್ನು ಬೆಳೆಸಿದ ಭಾರತ್ ಬ್ಯಾಂಕ್ ಇನ್ನಷ್ಟು ಉತ್ತರೋತ್ತರವಾದ ಸಾಧನೆಗೈಯಲಿ. ಭಾರತ್ ಬ್ಯಾಂಕ್ ದೇಶದ ಒಂದು ಸರ್ವೋತ್ಕರ್ಷಕ ಬ್ಯಾಂಕ್ ಆಗಿ ರೂಪುಗೊಳ್ಳಲಿ ಎಂದು ಮೋಗವೀರರ ಕುಲದೇವತೆ ಮಹಿಷಾಮರ್ಧಿನಿಯನ್ನು ಪ್ರಾಥಿರ್üಸುತ್ತೇನೆ ಎಂದು ಸುರೇಶ್ ಕಾಂಚನ್ ಶುಭಾರೈಸಿದರು.
ಡಾ| ಎಸ್.ಆರ್ ಪ್ರಭು ಮಾತನಾಡಿ ಕನ್ನಡಿಗರ ಸುಮರ್ಣರ ಬ್ಯಾಂಕ್ ಮಹರಾಷ್ಟ್ರದ ಮುಂಬಯಿಯಲ್ಲಿ ಸೋಣವಾಗಿ ಪ್ರಕಾಶಿಸಲಿ ಎಂದರು.
ಆಥಿರ್üಕ ಬೆಳವಣಿಗೆಯ ಸ್ಪರ್ಧಾತ್ಮಕ ಯುಗದಲ್ಲೂ ಸಾಧನಾಶೀಲ ಬ್ಯಾಂಕ್ ಆಗಿ ಮುನ್ನಡೆಯುತ್ತಿರುವ ಭಾರತ್ ಬ್ಯಾಂಕ್ ಇನ್ನಷ್ಟು ಸಾಧನಾಮಯವಾಗಲಿ ಎಂದು ಉದ್ಯಮಿ ರಘು ಪೂಜಾರಿ ಹಾರೈಸಿದರು.
ಜೈಕೃಪಾ ಕೋ.ಹೌಸಿಂಗ್ ಸೊಸೈಟಿ ಕಾರ್ಯದರ್ಶಿ ಕಾಳೇಶ್ ಪಾದಂಡೆ ಮಾತನಾಡಿ ನಮ್ಮ ಪ್ರದೇಶಕ್ಕೆ ಈ ಬ್ಯಾಂಕ್ ವರವಾಗಿದೆ. ಸ್ಥಾನೀಯ ಜನತೆಯ ಆಶೀರ್ವದ ಈ ಸಂಸ್ಥೆಗಿದೆ ಎಂದರು.
ದಿನೇಶ್ ಮಾತ್ರೆ ಮತ್ತು ಅಮೃತ್ ಶ್ಹಾ, ಜೈಕೃಪಾ ಕೋ.ಹೌಸಿಂಗ್ ಸೊಸೈಟಿಯ ತುಳಸೀರಾಮ್ ಶಿಂಧೆ ಸಂದರ್ಭೋಚಿತವಾಗಿ ಮಾತನಾಡಿ ಶುಭೇಚ್ಛ ಕೋರಿದರು.
ಕಾರ್ಯಾಧ್ಯಕ್ಷ ಜಯ ಸುವರ್ಣ, ರೋಹಿಣಿ ಸಾಲ್ಯಾನ್, ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ, ಬ್ಯಾಂಕ್‍ನ ನಿರ್ದೇಶಕರುಗಳಾದ ಯು.ಎಸ್ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ರೋಹಿತ್ ಎಂ.ಸುವರ್ಣ, ಹರೀಶ್ಚಂದ್ರ ಜಿ.ಮೂಲ್ಕಿ, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಅಶೋಕ್ ಎಂ. ಕೋಟ್ಯಾನ್, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ಅನಿಲ್‍ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್, ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್ ಅವರು ಶಾಖೆಯ ಮುಖ್ಯಸ್ಥ ಶೈಲೇಶ್ ಕರ್ಕೇರ, ಸಹಾಯಕ ಪ್ರಬಂಧಕಿ ಜಯಶ್ರೀ ಎಸ್.ಬಂಗೇರಾ, ಬಿಪಿನ್ ಎಸ್.ಚವ್ಹಾಣ್, ರಮೇಶ್ ಪೂಜಾರಿ, ಅಶ್ವತ್ ಎನ್.ಸುವರ್ಣ, ಶ್ರುತಿ ಶಶಿಧರನ್ ಅವರಿಗೆ ಪುಷ್ಫಗುಪ್ಚವನ್ನೀಡಿ ಶುಭಾರೈಸಿದರು. ಅಂತೆಯೇ ಸುರೇಶ್ ಆರ್.ಕಾಂಚನ್, ಸಂಜಯ್ ನಾಯ್ಕ್, ನಾರಾಯಣ ಶೆಟ್ಟಿ ಮತ್ತು ಶ್ರೀಮತಿ ಸುಂದರಿ ಶೆಟ್ಟಿ ದಂಪತಿಯನ್ನು ಜಯ ಸುವರ್ಣರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗೌರವ್ವಾನಿತ ಅತಿಥಿüಗಳಾಗಿ ನಗರ ಸೇವಕ ಸಂಜಯ್ ನಾಯ್ಕ್, ಡಿ.ಆರ್ ಮೆಹ್ತಾ, ಶ್ರೀನಿವಾಸ ಆರ್.ಕರ್ಕೇರಾ, ಸಿಎ| ಅಶ್ವಜಿತ್ ಹೆಜ್ಮಾಡಿ, ನ್ಯಾಯವಾದಿ ಅಜೀತ್ ಶೆಟ್ಟಿ, ಪ್ರತಾಪ್ ಶೆಟ್ಟಿ, ಪ್ರಕಾಶ್ ಮೂಡಬಿದ್ರೆ, ಶ್ರೀಮತಿ ಸುಂದರಿ ಶೆಟ್ಟಿ, ಸವಿತಾ ಶೆಟ್ಟಿ, ಬ್ಯಾಂಕ್‍ನ ಉಪ ಪ್ರಧಾನ ವ್ಯವಸ್ಥಾಪಕರುಗಳಾದ ಸುರೇಶ್ ಎಸ್.ಸಾಲ್ಯಾನ್, ಪ್ರಭಾಕರ್ ಜಿ.ಸುವರ್ಣ, ಸಹಾಯಕ ಪ್ರಧಾನ ವ್ಯವಸ್ಥಾಪಕ ವಾಸುದೇವ ಪಿ.ಸಾಲ್ಯಾನ್, ಬ್ಯಾಂಕ್‍ನ ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್, ವಿಜಯ ಪಾಲನ್ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳೂರು ಶೇಖರ್ ಶಾಂತಿ ಮತ್ತು ಉಳ್ಳೂರು ಧನಂಜಯ್ ಶಾಂತಿ ವಾಸ್ತುಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆ, ದ್ವಾರಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ಅಶ್ವತ್ ಎನ್.ಸುವರ್ಣ ಹಾಗೂ ಜಯಂತಿ ವಿ.ಕೋಟ್ಯಾನ್ ಮತ್ತು ವಿನೋದ್ ಕೋಟ್ಯಾನ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಸ್ವಾಗತಿಸಿ, ಬ್ಯಾಂಕ್‍ನ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಶೈಲೇಶ್ ಕರ್ಕೇರ ಕೃತಜ್ಞತೆ ಸಲ್ಲಿಸಿದರು.










