ಬಂಟ್ವಾಳ: ಜ.02 ದ.ಕ.ಜಿ.ಪ. ಮಾ. ಹಿ.ಪ್ರಾ ಶಾಲೆ ಬೊಳಂತೂರು ಇದರ ಶತಮಾನೋತ್ಸವವು ವಿಜೃಂಭಣೆ ಯಿಂದ ನಡೆಯಿತು. ಪೂರ್ವಾಹ್ನದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್‍ನ ಅಧ್ಯಕ್ಷೆಯಾದ ಶ್ರೀಮತಿ ಆಸ್ಯಮ್ಮರವರು ಧ್ವಜಾರೋಹಣಾ ಮಾಡುವ ಮೂಲಕ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿ ಗಳಿಗೆ, ಹಳೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿವಿಧ ಚಟುವಟಿಕಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಬಹುಮಾನ ವನ್ನು ನೀಡಲಾಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರ ಶೇಖರ್ ರೈ ಹಾಗೂ ಸದಸ್ಯರು ಹಳೆವಿದ್ಯಾರ್ಥಿ ಸಂಘದ ಡಾ| ಬೀರಾನ್ ಮೊಯಿದಿನ್ ಮತ್ತು ಸದಸ್ಯರು, ಎಸ್.ಡಿ.ಎಂಸಿ. ಅಧ್ಯಕ್ಷರಾದ ಇಸ್ಮಾಯಿಲ್ ಕೆ ಹಾಗೂ ಸದಸ್ಯರು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರ್ ವಿ, ಮುಖ್ಯಶಿಕ್ಷಕಿ ಶ್ರೀಮತಿ ಜುಡಿತ್ ಆಲಿಸ್ ಡಿಸೋಜ, ಶಿಕ್ಷಣ ಸಂಯೋಜಕಿ ಶ್ರೀಮತಿ ಪುಷ್ಪ, ಕಲ್ಲಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಉದಯ ಕುಮಾರ್ ರವರು ಉಪಸ್ಥಿತರಿದ್ದರು.
ಹಲವು ವರ್ಷಗಳ ಹಿಂದೆ ಊರಿಗೊಂದು ಶಾಲೆಯಿದ್ದಲ್ಲಿಅದೇ ಹಿರಿದು. ಇದ್ದರೂ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೆ ಮುಂದೆ ನೋಡುತ್ತಿದ್ದರು. ಆದರೆ ಅಂದಿನಿಂದ ಇಂದಿಗೆ ಹಲವು ಬದಲಾವಣೆಗಳೇ ಆಗಿವೆ. ಶಿಕ್ಷಣದ ಮಹತ್ವ ಅರಿತು ಗ್ರಾಮದಲ್ಲಿ ಹಲವು ಶಾಲೆಗಳೇ ತೆರೆದವು ಆದರೂ, ಇಂದಿನವರೆಗೆ ಸರಾಸರಿ 250ರಂತೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿದ್ದು ಸರಕಾರಿ ಶಾಲೆಯಾಗಿದ್ದೂ ಅದರ ಸಾರ್ಥಕ್ಯವನ್ನು ಉಳಿಸಿಕೊಂಡಿದೆ. ಈ ಶಾಲೆಯ ನಿರ್ಮಾಣಕ್ಕೆ ಕಾರಣಕರ್ತರಾದ ದಿವಂಗತ ಉಗ್ಗಪ್ಪ ರೈ ರವರ ಶ್ರಮವನ್ನು ಶ್ಲಾಘಿಸಿದರು.ಒಂದು ಊರು ಹಾಗೂ ಶಾಲೆಗೆ ಅವಿನಾಭಾವ ಸಂಬಂಧವಿದೆ. ಇವೆರಡು ಪರಸ್ಪರ ಹೊಂದಿಕೊಂಡಿದ್ದಾಗ ಮಾತ್ರ ಶಾಲೆ ಹಾಗೂ ಊರು ಪ್ರಗತಿಯಾಗಲು ಸಾಧ್ಯ. ಒಂದು ಶಾಲೆ ಹೇಗಿದೆ ಎಂದು ತಿಳಿಯಬೇಕಾದರೆ ಆ ಊರಿನ ಜನರನ್ನು ನೋಡಬೇಕು. ಮಕ್ಕಳು ನಿರಂತರವಾಗಿ ಶಾಲೆಗೆ ಹಾಜರಾಗಬೇಕು. ಪೋಷಕರು ತಮ್ಮ ಮಕ್ಕಳ ಕಲಿಕೆಯ ಬಗ್ಗೆ ತಿಳಿಯಲು ಆಗಾಗ ಭೇಟಿ ನೀಡಬೇಕು. ಶತಮಾನದಿಂದ ಈ ವಿಚಾರಗಳಲ್ಲಿಶಾಲೆಯು ನಡೆದು ಬಂದದಾರಿಯನ್ನು ಶ್ಲಾಘಿಸಿ ಇದೊಂದು ಮಾದರಿ ಶಾಲೆಯೇ ಸರಿ ಎಂದು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರಣ್ಯ ಪರಿಸರ ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಬಿ ರಮಾನಾಥ ರೈಇವರು ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ನೂತನವಾಗಿ ನಿರ್ಮಿಸಿದ ರಂಗ ಮಂದಿರ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ ದಾನಿಗಳು, ವಿದ್ಯಾಭಿಮಾನಿಗಳನ್ನು ಸ್ಮರಿಸುತ್ತಾ ಶಾಲಾ ಉನ್ನತಿಗಾಗಿ ಇರುವ ಯೋಜನೆಗಳನ್ನು ಸಕಾರತ್ಮಕ ವಾಗಿ ಬಳಸಿಕೊಳ್ಳ ಬೇಕು. ಶಾಲೆ ಎಂಬುದು ಸಮಾಜಕ್ಕೆ ಹಿಡಿದ ಕನ್ನಡಿ. ನಾವು ಹೇಗಿರುತ್ತೇವೋ ಅದು ಹಾಗೆಯೇ ಪ್ರತಿನಿಧಿಸುತ್ತದೆ ಎಂದು ಮುಖ್ಯ ಅತಿಥಿಯಾಗಿದ್ದ ಎಂ.ಎಸ್. ಮಹಮ್ಮದ್ ರವರು ಅಭಿಪ್ರಾಯಪಟ್ಟರು.
ಶ್ರೀಯುತ ನೇಮಿರಾಜ ರೈ, ಸದಸ್ಯರು ಮಾಜಿ ಅಧ್ಯಕ್ಷರು ಕೆ.ಪಿ.ಎಂ.ಸಿ ಬಂಟ್ವಾಳ ಇವರು ಈ ಶಾಲೆಯನ್ನು ಕಟ್ಟಿ ಬೆಳೆಸಲು ಶ್ರಮಿಸಿದ ತಮ್ಮ ಕುಟುಂಬದ ಹಿರಿಯರಾದ ದಿವಂಗತ ಉಗ್ಗಪ್ಪ ಶೆಟ್ಟಿಯವರನ್ನು ಸ್ಮರಿಸುತ್ತಾ ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕಿದರು.
ಮಗು ಇಂದಿನ ಆಧುನಿಕತೆಗೆ ಸಂಬಂಧಿಸಿದಂತೆ ಶಿಕ್ಷಣದ ಅಗತ್ಯತೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣದ ಮಹತ್ವವನ್ನು ತಿಳಿದು ಕೊಂಡು ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೇಕು. ವಿದ್ಯಾರ್ಥಿಗಳು ಕಲಿಕೆಯನ್ನು ತಮ್ಮ ಜೀವನೋಪಾಯಕ್ಕೆ ಮಾತ್ರ ವಲ್ಲದೆ ಸರ್ವಾಂಗೀಣ ಬೆಳವಣಿಗೆಗೆ ಬಳಸಿಕೊಂಡಾಗ ಮಾತ್ರ ಉತ್ತಮ ಪರಿಣಾಮ ಬೀರಲು ಸಾಧ್ಯವೆಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾಧ ಶ್ರೀಯುತ ಯಶವಂತ ಡಿ ರವರು ತಿಳಿಸಿದರು.
ಶ್ರೀಯುತ ಮಾಧವ ಮಾವೆ, ತಾಲೂಕು ಪಂಚಾಂiÀi ತ್‍ಸದಸ್ಯರು ಶ್ರೀಯುತ ಅಬ್ಬಾಸ್ ಅಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶ್ರೀ ಜಯರಾಜ್ ಗೌರವಾಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘದ, ಬೊಳಂತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಸ್ಯಮ್ಮ ಉಪಾಧ್ಯಕ್ಷ ಶ್ರೀ ಚಂದ್ರಶೇಖರ ರೈ, ಮುಖ್ಯ ಶಿಕ್ಷಕಿ ಶ್ರೀಮತಿ ಜುಡಿತ ಅಲಿಸ್ ಡಿ ಸೋಜ, ಗ್ರಾಮ ಪಂಚಾಯತ್ ಸದಸ್ಯರು ವೇದಿಕೆಯಲ್ಲಿದ್ದರು.
ಈ ಶಾಲೆಯಲ್ಲಿ ಸೇವೆಸಲ್ಲಿಸಿ ವಿಶೇಷವಾಗಿ ಕೊಡುಗೆ ನೀಡಿದ ಶ್ರೀಯುತ ಶಂಕರ್ ವಿ. ಶ್ರೀ ಬಿ ತಾಬ್ರ ದ.ಕ.ಜಿ.ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಸುಲೇಮಾನ್ ಹಾಜಿ ನಾರ್ಶ ಇವರನ್ನು ಉಸ್ತುವಾರಿ ಸಚಿವ ಶ್ರೀ ರಮಾನಾಥ ರೈ ಇವರು ಸನ್ಮಾನಿಸುವುದರೊಂದಿಗೆ ಶಾಲಾ ಹಸ್ತ ಪ್ರತಿ ಚಿಗುರು ಬಿಡುಗಡೆಗೊಳಿಸಲಾಯಿತು.
ಇದುವರೆಗೂ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರನ್ನು ಸ್ಮರಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ನಡೆದವು. ಹಳೆವಿದ್ಯಾರ್ಥಿ ಸಂಘದ ಪ್ರಾಯೋಜಿತವಾಗಿ “ಮುತ್ತು ಮನಿಪುಜ್ಜಿ” ನಾಟಕ ಪ್ರದರ್ಶನಗೊಂಡಿತು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಇಸ್ಮಾಯಿಲ್ ಕೆ ಸ್ವಾಗತಿಸಿ ಶ್ರೀ ಬೀರಾನ್ ಮೊಯಿದಿನ್ ವಂದಿಸಿದರು. ಶಿಕ್ಷಕರಾದ ಶ್ರೀ ಬಾಬು ನಾಯ್ಕ ಮತ್ತು ಹರೀಶ ಬಿ ನಿರೂಪಿಸಿದರು.ಶಿಕ್ಷಕ ವೃಂದ ದವರು ಸಹಕರಿಸಿದರು
