ಮೂಡುಬಿದರೆ: ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಮೂಡುಬಿದರೆ ಪುರಸಭೆಯ ವತಿಯಿಂದ ರೂ 12ಲಕ್ಷ ವೆಚ್ಚದಲ್ಲಿ ಖರೀದಿಸಿರುವ ನೀರಿನ ಟ್ಯಾಂಕರನ್ನು ಯುವಜನ ಸೇವೆ ಸಚಿವ ಕೆ. ಅಭಯಚಂದ್ರ ಜೈನ್ ಶನಿವಾರ ಪುರಸಭೆಯ ಆವರಣದಲ್ಲಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪ್ರತಿಯೊಬ್ಬರಿಗೂ ನೀರು ಅವಶ್ಯಕವಾಗಿ ಬೇಕು. ಬೇಸಿಗೆ ಸಮಯದಲ್ಲಿ ನೀರಿನ ತೊಂದರೆ ಕಾಡಬಹುದು ಅದಕ್ಕಾಗಿ ಜನರು ಪರದಾಡುವಂತ್ತಾಗಬಾರದೆಂಬ ದೃಷ್ಟಿಯಿಂದ ಪುರಸಭೆಯು ಈ ನೀರಿನ ಟ್ಯಾಂಕರನ್ನು ಖರೀದಿಸಿದೆ. ಇದರ ಪ್ರಯೋಜನ ಪ್ರತಿಯೊಬ್ಬರಿಗೂ ಆಗಲಿ ಎಂದು ತಿಳಿಸಿದರು.

ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸದಸ್ಯರುಗಳಾದ ರತ್ನಾಕರ ದೇವಾಡಿಗ, ಬಾಹುಬಲಿ ಪ್ರಸಾದ್, ಪಿ.ಕೆ.ತೋಮಸ್, ಅಬ್ದುಲ್ ಬಶೀರ್, ಸುಪ್ರಿಯಾ ಡಿ.ಶೆಟ್ಟಿ, ರಾಜೇಶ್ ಕೋಟೆಗಾರ್, ಇಕ್ಬಾಲ್ ಕರೀಂ, ಪುರಸಭಾ ಕಂದಾಯ ಅಧಿಕಾರಿ ಧನಂಜಯ ಮತ್ತು ಆರೋಗ್ಯ ನಿರೀಕ್ಷಕಿ ಇಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
