ಮೂಡುಬಿದರೆ: ಸಮಾಜ ಸೇವಗೆ ಮುನ್ನುಡಿ ಬರೆದ, ಗ್ರಾಮೀಣ ಭಾಗದ ಜನ ಸಮಾನ್ಯರ ಪಾಲಿಗೆ ಆಶಾಕಿರಣವೆನಿಸಿದ, ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ನೇತೃತ್ವದಲ್ಲಿ ಮಂಗಳೂರು ವೆನ್ ಲಾಕ್ ಅಸ್ವತ್ರೆಯ ಸಂಚಾರ ನೇತ್ರ ಘಟಕ , ಮಂಗಳೂರಿನ ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ಹಾಗೂ ಮುಚ್ಚೂರು ನೀರುಡೆ ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಜನವರಿ 8 ರಂದು, ಮೂಡಬಿದಿರೆ ಸಮಾಜ ಮಂದಿರದಲ್ಲಿ ಬೆಳ್ಳಿಗ್ಗೆ 9.30 ರಿಂದ 12.30ವರೆಗೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಚಾವಡಿ ಮನೆ ಜಗನ್ನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

images
ಶಿಬಿರವನ್ನು ಪುರಸಭೆಯ ಅಧ್ಯಕ್ಷೆ ರೂಪಾ ಎಸ್.ಶೆಟ್ಟಿ ಉದ್ಘಾಟಿಸಲಿದ್ದು ಮೂಡುಬಿದಿರೆ ತುಳು ಕೂಟದ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ವಕೀಲ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಆರ್ ಪಂಡಿತ್, ಬಿಲ್ಲವ ಸಂಘದ ಅಧ್ಯಕ್ಷ ಪೂವಪ್ಪ ಕುಂದರ್, ರೋಟರ್ಯಾಕ್ಟ ಅಧ್ಯಕ್ಷ ಮಹಮದ್ ಹರೀಫ್ ವೆನ್‍ಲಾಕ್ ಆಸ್ವತ್ರೆ ನೇತ್ರಾಧಿಕಾರಿ ಮಂಜುಳಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಿತಿಯ ಸಂಚಾಲಕ ನರಸಿಂಹ ಮಡಿವಾಳ್, ಸದಾನಂದ ನಾರಾವಿ , ಸಾರ್ವಜನಿಕ ಸಂಪರ್ಕ ಅಧಿಕಾರಿ ಸೀತಾರಾಮ್ ಶೆಟ್ಟಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *