ಬಂಟ್ವಾಳ: ಶಿಕ್ಷಕರಾದವರು ರಂಗಕಲೆಯ ಅಂಶಗಳನ್ನು ತಮ್ಮ ಬೋಧನಾಕ್ರಮದಲ್ಲಿ ಸಂಯೋಜಿಸಿಕೊಂಡಲ್ಲಿ ಬೋಧನಾ ಶೈಲಿ ಪರಿಣಾಮಕಾರಿಯಾಗಲು ಸಾಧ್ಯ  ಎಂದು ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಬಾಲಕೃಷ್ಣ ಗಟ್ಟಿ ಹೇಳಿದ್ದಾರೆ.

DSC_1113
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ರಜತ ವರ್ಚಾಚರಣೆ ಅಂಗವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಬಂಟ್ವಾಳ ತಾ.ಕಾರ್ಯನಿರತ ಪತ್ರಕರ್ತರ ಸಂಘ,ಪ್ರೆಸ್ಕ್ಲಬ್ ಬಂಟ್ವಾಳ ಇದರ ಸಹಯೋಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆದ ಮೂರು ದಿನಗಳ ಕಾಲ ನಡೆದ “ಭಾಷೆ-ಭಾವ-ಅಭಿವ್ಯಕ್ತಿ” ಕಾರ್ಯಾ ಗಾರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಿದ್ದರು.
ನಾಟಕ ನಮಗೆ ಬಹಳಷ್ಟನ್ನು ಕಲಿಸಿಕೊಡುತ್ತದೆ ಎಂಬ ಬಗ್ಗೆ ಉದಾಹರಣೆ ಸಹಿತ ವಿವರಿಸಿದ ಅವರು, ಪ್ರಸ್ತುತ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ತುಳು ಚಲನಚಿತ್ರಗಳು ಜನಪ್ರಿಯವಾಗಲು ಅದರಲ್ಲಿನ ನಟರೆಲ್ಲರ ಹಿನ್ನೆಲೆ ರಂಗಭೂಮಿ ಆಗಿರುವುದೇ ಕಾರಣ ಎಂದರು. ರಂಗಭೂಮಿ ವ್ಯಕ್ತಿತ್ವವನ್ನು ರೂಪಿಸಲು ಪ್ರಬಲ ಮಾಧ್ಯಮವು ಆಗಿದೆ ಎಂದ ಅವರು, ಶಿಕ್ಷಕರು ಹಾಗೂ ಯುವಪತ್ರಕರ್ತರು ಹೆಚ್ಚು ಹೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಬೇಕು ಎಂದು ಆವರು ಕಿವಿಮಾತು ಹೇಳಿದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಶಿಬಿರಾರ್ಥಿಗಳಾದ ಸುನಿಲ್,ಜೆಸಿಂತಾರವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ ಅತಿಥಿಯಾಗಿ ಭಾಗವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಆಚರಣಾ ಸಮಿತಿ ಸಂಚಾಲಕ ವೆಂಕಟೇಶ್ ಬಂಟ್ವಾಳ ಸ್ವಾಗತಿಸಿದರು. ಶಿಬಿರಾಧಿಕಾರಿ, ಸಮಿತಿಯ ಪ್ರ.ಕಾರ್ಯದರ್ಶಿ  ಸಂದೀಪ್ ಸಾಲ್ಯಾನ್ ನಿರೂಪಿಸಿ, ವಂದಿಸಿದರು.
ಸದಸ್ಯರಾದ ಕಿಶೋರ್ ಪೆರಾಜೆ, ಚಂದ್ರಶೇಖರ್ ಕಲ್ಮಲೆ,ಯಾದವ ಅಗ್ರಬೈಲ್ರವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *