ಕೈಕಂಬ: ಪೊಳಲಿ ದೇವಸ್ಥಾನದ ವಠಾರ, ಪುಂಚಮೆ ಪರಿಸರ ಹಾಗೂ ಕರಿಯಂಗಳ ಗ್ರಾಮ ಪಂಚಾಯತ್ ವಠಾರದಲ್ಲಿ ಶನಿವಾರ ಬೆಳಗ್ಗೆ ನಡೆದ ಸ್ವಚ್ಚತಾ ಆಂದೋಲನಕ್ಕೆ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾ ಚೈತನ್ಯನಂದ ಇವರು ಚಾಲನೆ ನೀಡಿದರು.

08

02

03

04

05

06

07 ನಂತರ ಮತಾನಾಡಿ ದೇಶದಲ್ಲಿ ಸ್ವಚ್ಚತಾ ಆಂದೋಲನ ನಡೆಯುತ್ತಿದೆ. ಮುಂದುವರಿದ ದೇಶದಲ್ಲಿ ಈ ಆಂದೋಲನ ಯಶಸ್ವಿಯಾಗಲು ಅನೇಕ ಸಮಯವೇ ಹಿಡಿದಿದೆ ಹಾಗಿರುವಾಗ ಭಾರತದಂತ ರಾಷ್ಟ್ರದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಸ್ವಚ್ಚತೆ ಬಗೆಗೆ ಅರಿಯು ಮುಡುತ್ತಿದೆ. ಯುವಕರು ಈ ಬಗ್ಗೆ ಕಾಳಜಿ ವಹಿಸಬೇಕು ಎಂದರು. ಶಾಲಾ ಕಾಲೇಜುಗಳಲ್ಲಿ ಸ್ವಚ್ಚತೆಗೆ ಆಧ್ಯತೆ ನೀಡಬೇಕು. ಕಾರ್ಯಕ್ರಮದಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ನ ಉಪಾಧ್ಯಕ್ಷ ಚಂದ್ರಶೇಖರ ರಾವ್, ಗ್ರಾ.ಪಂ.ಸದಸ್ಯರಾದ ಕಿಶೋರ್ ಪಲ್ಲಿಪಾಡಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿ ಡೊಂಬಯ್ಯ ಇಡ್ಕಿದು, ಯಶವಂತ ಪೊಳಲಿ ,ಶ್ರೀ ವಿಲಾಸ ಹೊಟೆಲ್ ಮಾಲಕ ವೆಂಕಟೇಶ್ ನಾವಡ, ಚಂದ್ರಹಾಸ ಪಲ್ಲಿಪಾಡಿ, ರಾಜು ಕೋಟ್ಯಾನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಶಿಬಿರದ ನಾಯಕಿ ಇಂಪನಾ ಕಾರ್ಯಕ್ರಮ ನಿರ್ವಹಿಸಿದರು.ಮಧ್ಯಾಹ್ನದ ನಂತರ ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವ ಕುರಿತಾಗಿ ಸ್ವಾಮಿ ವಿವೇಕಚೈತನ್ಯಾನಂದ ಅವರು ವಿದ್ಯಾರ್ಥಿಗಳನ್ನುದ್ಧೇಶಿಸಿ ಉಪನ್ಯಾಸ ನೀಡಿದರು.

By suddi9

Leave a Reply

Your email address will not be published. Required fields are marked *